ತಮಿಳುನಾಡು : ಬೈಕ್ ಮೇಲೆ ಬಂದ 6 ಜನ ದುಷ್ಕರ್ಮಿಗಳ ಗ್ಯಾಂಗ್ ಒಂದು ಬಿಎಸ್ಪಿಯ ರಾಜ್ಯಾಧ್ಯಕ್ಷ ಕೆ.ಆರ್ಮ್ ಸ್ಟ್ರಾಂಗ್ ಅವರನ್ನು ಬರ್ಬರವಾಗಿ ಹತ್ಯೆಗೈದಿದ್ದು, ರಾಜ್ಯದ ಜನ ಬೆಚ್ಚಿ ಬಿದ್ದಿದ್ದಾರೆ.
ನೆನ್ನೆ ಸಂಜೆ 7-30ರ ಸುಮಾರಿಗೆ ಕೆ.ಆರ್ಮ್ ಸ್ಟ್ರಾಂಗ್ ತಮ್ಮ ಮನೆಯ ಒಳೆಗೆ ಪ್ರವೇಶಿಸುತ್ತಿರುವ ವೇಳೆ ಪಾತಕಿಗಳು ದಾಳಿ ನಡೆಸಿದ್ದಾರೆ. ಚೆನ್ನೈನ ಪೆರಂಬುರ್ ನಲ್ಲಿರುವ ಅವರ ನಿವಾಸದ ಸದಾಯಪ್ಪನ್ ರಸ್ತೆಯ ಬಳಿ ಭೀಕರವಾಗಿ ಕೊಲೆ ಮಾಡಲಾಗಿದೆ.
ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡು ಪ್ರಜ್ಞೆ ತಪ್ಪಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲೇ ಕೊನೆಯುಸಿರು ಚೆಲ್ಲಿದ್ದರು. ಚೆನ್ನೈ ಕಾರ್ಪೊರೇಷನ್ ನ ಕೌನ್ಸಿಲರ್ ಕೂಡ ಆಗಿದ್ದ ಆರ್ಮ್ ಸ್ಟ್ರಾಂಗ್ , ಶೋಷಿತರ ಧ್ವನಿಯಾಗಿ ಗುರುತಿಸಿಕೊಂಡಿದ್ದರು.
ಇನ್ನು ದಾಳಿ ಏಕೆ ನಡೆಯಿತು ಎಂಬುದನ್ನು ಕುರಿತು ಕೊಳತ್ತೂರ್ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA