ಬಿಹಾರ: ತನಗೆ ಕಚ್ಚಿದ ಹಾವನ್ನು ಹಿಡಿದ ವ್ಯಕ್ತಿಯೊಬ್ಬ ಹಾವಿಗೆ ಎರಡು ಬಾರಿ ತಾನೂ ಕಚ್ಚಿ ಸೇಡು ತೀರಿಸಿಕೊಂಡ ಘಟನೆ ಬಿಹಾರದ ನವಾಡ ಪ್ರದೇಶದಲ್ಲಿ ನಡೆದಿದೆ.
ನವಾಡ ಅರಣ್ಯ ಪ್ರದೇಶದಲ್ಲಿ ರೈಲ್ವೆ ಕಾಮಗಾರಿ ನಡೆಯುತ್ತಿದ್ದ ವೇಳೆ ರೈಲ್ವೇ ಉದ್ಯೋಗಿಯಾಗಿರುವ ಸಂತೋಷ್ ಲೋಹರ್ ಕಾರ್ಮಿಕರ ಜೊತೆ ಉಳಿದುಕೊಂಡಿದ್ದರು. ಕಳೆದ ಮಂಗಳವಾರ ರಾತ್ರಿ ಊಟ ಮಾಡಿ ಮಲಗಿದ್ದರು. ಈ ವೇಳೆ ಹಾವು ಕಚ್ಚಿದೆ.
ಇದರಿಂದ ಗಾಬರಿಗೊಂಡ ಸಂತೋಷ್ ಗೆ ಆತನ ಗೆಳೆಯರು ಕಚ್ಚಿದ ಹಾವಿಗೆ ತಿರುಗಿ ಕಚ್ಚಿದರೆ ಮೈಯಲ್ಲಿದ್ದ ವಿಷ ವಾಪಸ್ಸು ಹಾವಿಗೆ ಹೋಗುತ್ತದೆ ಎಂದು ಅಲ್ಲಿನ ಜನರ ನಂಬಿಕೆ ಎಂದು ಹೇಳಿದ್ದು, ಅದರಂತೆ ಸಂತೋಷ್ ತನಗೆ ಕಚ್ಚಿದ ಹಾವಿಗೆ ಹಿಡಿದು ಎರಡು ಬಾರಿ ಕಚ್ಚಿದ್ದಾರೆ. ಬಳಿಕ ಆಸ್ಪತ್ರೆಗೆ ದಾಖಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಸಂತೋಷ್ ಲೋಹಾರ್ ವೈದ್ಯರ ಚಿಕಿತ್ಸೆಯಿಂದ ಬದುಕುಳಿದಿದ್ದಾರೆ. ಆದರೆ ಸಂತೋಷ್ ಲೋಹಾರ್ ಕಚ್ಚಿದ ಪರಿಣಾಮ ಹಾವು ಸಾವನ್ನಪ್ಪಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA