ಸರಗೂರು: ತಾಲ್ಲೂಕಿನ ಬಿ ಮಟಕೆರೆ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಇದೆ. ಅದರೆ ಅಲ್ಲಿ ಗ್ರಾಹಕರಿಗೆ ಬ್ಯಾಂಕ್ ಸಿಬ್ಬಂದಿಗಳು ಸರಿಯಾದ ರೀತಿಯಲ್ಲಿ ಹಣವನ್ನು ನೀಡುತ್ತಿಲ್ಲ. ಅವರ ಉಡಾಫೆ ಮಾತುಗಳಿಂದ ಮನಸ್ಸಿಗೆ ನೋವುಂಟು ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದರು.
ಬಿ ಮಟಕೆರೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ಎಂಬುವುದು ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಲಿ ಎಂದು ನಿರ್ಮಾಣ ಮಾಡಿದ್ದರು. ಇಲ್ಲಿನ ಬ್ಯಾಂಕ್ ಮ್ಯಾನೇಜರ್ ರಜಿನಿಕಾಂತ್ ಹಾಗೂ ಸಿಬ್ಬಂದಿಗಳಾದ ಪ್ರಸಾದ್ ಮತ್ತು ವೆಂಕಟೇಶ್ ಎಂಬುವರು ಬ್ಯಾಂಕ್ ಗೆ ಬರುವ ಗ್ರಾಹಕರ ಮೇಲೆ ಉಡಾಫೆ ಉತ್ತರ ನೀಡುತ್ತಾರೆ ಎಂದು ಆರೋಪಿಸಲಾಗಿದೆ.
ಈ ಬ್ಯಾಂಕ್ ಗೆ ಸುಮಾರು 35 ಗ್ರಾಮಗಳು ಒಳಪಡುತ್ತದೆ. ಶ್ರೀನಿವಾಸ ಎಂಬುವರು ಬ್ಯಾಂಕ್ ನಲ್ಲಿ ಖಾತೆ ತೆರೆದಿದ್ದು ಅವರ ಖಾತೆಯಿಂದ ಹಣವನ್ನು ತೆಗೆದುಕೊಳ್ಳಲು ಬಂದಿದ್ದ ಸಮಯದಲ್ಲಿ ಬ್ಯಾಂಕ್ ಸಿಬ್ಬಂದಿ ಪ್ರಸಾದ್, ನಾವು 10ರಿಂದ 15 ಸಾವಿರ ಹಣ ಮಾತ್ರವೇ ನೀಡುತ್ತೇವೆ. ನಿಮಗೆ ಸರಿಯಾಗಿಲ್ಲವಾದರೆ ನಿಮ್ಮ ಖಾತೆಯನ್ನು ಲಾಕ್ ಮಾಡಿಸಿಕೊಂಡು ಹೋಗಿ. ಇಲ್ಲಂದರೆ ಬೇರೆ ಬ್ಯಾಂಕ್ ನಲ್ಲಿ ಖಾತೆ ಮಾಡಿಕೊಳ್ಳಿ ಎಂದು ಬಾಯಿಗೆ ಬಂದಂತೆ ಮಾತನಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಬ್ಯಾಂಕ್ ಮ್ಯಾನೇಜರ್ ಬಳಿ ಮಾತನಾಡಿದಾಗ ಅವರು, ನಮ್ಮ ಬ್ಯಾಂಕ್ ನಲ್ಲಿ 10 ಲಕ್ಷದಲ್ಲಿ ಎಲ್ಲಾರಿಗೂ ನೀಡಬೇಕು. ನಿಮ್ಮಗೆ ಬೇಕಾದರೆ ನೀವುಗಳು ಒಂದು ದಿನ ಮುಂಚಿತವಾಗಿ ನಮಗೆ ಹೇಳಬೇಕು ಎಂದು ಹೇಳಿದ್ದಾರೆ, ನಮ್ಮ ಖಾತೆಯಿಂದ ನಮ್ಮ ಹಣವನ್ನು ತೆಗೆದುಕೊಳ್ಳಲು ಬೇಕಾದರೆ ಒಬ್ಬ ವ್ಯಕ್ತಿ ಯಿಂದ ಸಾಲ ಕೇಳುವ ರೀತಿಯಲ್ಲಿ ಇವರನ್ನು ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಖಾತೆದಾರ ಶ್ರೀನಿವಾಸ ಆರೋಪಿಸಿದ್ದಾರೆ.
ಬ್ಯಾಂಕ್ ಮ್ಯಾನೇಜರ್ ಹಾಗೂ ಸಿಬ್ಬಂದಿ ಪ್ರಸಾದ್, ವೆಂಕಟೇಶ್, ಇನ್ನೂ ಇತ್ತರರು ಸೇರಿ ಗ್ರಾಹಕರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಇವರು ಕರ್ನಾಟಕ ಗ್ರಾಮೀಣ ಬ್ಯಾಂಕ್ ಯನ್ನು ಸ್ವಂತ ಮನೆ ಮಾಡಿಕೊಂಡಿರುವ ರೀತಿಯಲ್ಲಿ ವರ್ತನೆ ಮಾಡುತ್ತಾರೆ. ಪ್ರಸಾದ್ ಎಂಬುವನು ಗ್ರಾಹಕರು ಹೋಗುವ ಸಮಯದಲ್ಲಿ ಅವರು ಹಣವನ್ನು ನೀಡಿ ಎಂದು ಕೇಳಿದಾಗ ಅವರನ್ನು ವಿಡಿಯೋ ಮಾಡಿಕೊಂಡು ನಿಮ್ಮ ಹಣವನ್ನು ನೀಡುವುದಿಲ್ಲ ಏನು ಮಾಡುಕೊಳ್ಳುತ್ತಿರಾ ಮಾಡಿಕೊಳ್ಳಿ. ನೀವು ಬೇಕಾದರೆ ಪೇಪರ್, ಮಾಧ್ಯಮ ವರದಿಗಾರರಿಗೆ ವಿಷಯವನ್ನು ಹೇಳಿಕೊಳ್ಳಿ ನಮ್ಮನ್ನು ಏನೋ ಮಾಡುವುದಕ್ಕೂ ಆಗಲ್ಲ ಎಂದು ಉಡಾಫೆ ಉತ್ತರ ನೀಡುತ್ತಾರೆ ಎಂದು ಅವರು ಅಳವತ್ತುಕೊಂಡಿದ್ದಾರೆ.
ಈ ಬಗ್ಗೆ ಬ್ಯಾಂಕ್ ನ ಸಂಬಂಧಪಟ್ಟ ಅಧಿಕಾರಿಗಳು ಬಂದು ಗ್ರಾಹಕರಿಗೆ ಅನುಕೂಲ ಮಾಡಿಕೊಡಬೇಕು ಹಾಗೂ ಬ್ಯಾಂಕ್ ಸಿಬ್ಬಂದಿ ವರ್ಗದವರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಶ್ರೀನಿವಾಸ ಆಗ್ರಹಿಸಿದರು.
ಸಂಬಂಧಪಟ್ಟವರ ಮೇಲೆ ಕಾನೂನು ಕ್ರಮ ಜರುಗಿಸಲ್ಲ ಇಲ್ಲಾಂದ್ರೆ ಮುಂದಿನ ದಿನಗಳಲ್ಲಿ ಬ್ಯಾಂಕ್ ಮುಂಭಾಗದಲ್ಲಿ ಬ್ಯಾಂಕ್ ಗೆ ಬೀಗವನ್ನು ಜಡಿದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಸಂಘಟನೆ ತಾಲ್ಲೂಕು ಸಂಚಾಲಕ ಕೂಡಗಿ ಗೋವಿಂದರಾಜು,ಮಾನವ ಹಕ್ಕುಗಳ ಹಾಗೂ ಮಾಹಿತಿಗಳ ಸಮಿತಿ ಅಧ್ಯಕ್ಷ ಶಿವಕುಮಾರ್, ನಾಗೇಂದ್ರ, ಶ್ರೀನಿವಾಸ, ಕೃಷ್ಣ, ಇನ್ನೂ ಮುಖಂಡರು ಸೇರಿದಂತೆ ಭಾಗವಹಿಸಿದ್ದರು.
ವರದಿ: ಹಾದನೂರು ಚಂದ್ರ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA