ಮಹಿಳೆಯೊಬ್ಬಳು ಬರೋಬ್ಬರಿ 50 ಜನರನ್ನು ಮದುವೆಯಾಗಿ ವಂಚಿಸಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಸಂಧ್ಯಾ (30) ಎಂಬ ಮಹಿಳೆಯು ಹಣದಾಸೆಗೆ ಬರೋಬ್ಬರಿ 50 ಜನರನ್ನು ವಿವಾಹವಾಗಿ ವಂಚಿಸಿದ್ದಾಳೆ.
ಇಲ್ಲಿನ ತಿರುಪುರದಲ್ಲಿನ 35 ವರ್ಷದ ಅವಿವಾಹಿತ ಯುವಕನೊಬ್ಬ ಆನ್ ಲೈನ್ ಪ್ಲಾಟ್ ಫಾರ್ಮ್ ʼದಿ ತಮಿಳು ವೇʼ ನಲ್ಲಿ ಪರಿಚಯವಾದ ಸಂಧ್ಯಾ ಎಂಬ ಮಹಿಳೆಯನ್ನು ಕೆಲ ಸಮಯದ ಹಿಂದೆ ಮದುವೆಯಾಗಿದ್ದನು.
ಮದುವೆಯಾದ ಕೆಲ ದಿನಗಳ ಬಳಿಕ ಆಕೆಯ ವರ್ತನೆಯಲ್ಲಿ ತೀರಾ ಬದಲಾವಣೆ ಕಂಡು ಬಂದಿದ್ದು, ನಂತರ ಆತ ಸಂಧ್ಯಾಳ ಆಧಾರ್ ಕಾರ್ಡ್ ಪರಿಶೀಲಿಸಿದ್ದಾರೆ. ಆಧಾರ್ ಕಾರ್ಡ್ ದಾಖಲೆಯಲ್ಲಿ ಸಂಧ್ಯಾಳ ಪತಿಯ ಹೆಸರು ಬೇರೆಯೇ ಇದೆ. ತನಗೆ ವಂಚನೆ ಮಾಡಿದ್ದಾಳೆ ಎಂದು ತಿಳಿದ ಈ ಯುವಕ ಸೀದಾ ಹೋಗಿ ತಾರಾಪುರಂ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾನೆ.
ಪೊಲೀಸರು ಸಂಧ್ಯಾಳನ್ನು ವಿಚಾರಣೆ ಒಳಪಡಿಸಿದಾಗ ಆಕೆಯ ವಂಚನೆಗಳು ಬಯಲಾಗಿವೆ. 10 ವರ್ಷಗಳ ಹಿಂದೆಯೇ ಮದುವೆಯಾಗಿದ್ದ ಈಕೆಗೆ ಒಂದು ಮಗು ಕೂಡಾ ಇದೆ. ನಂತರ ತನ್ನ ಮೊದಲ ಪತಿಯಿಂದ ಬೇರ್ಟಟ್ಟು ಹಣದಾಸೆಗೆ ಅವಿವಾಹಿತ ಪುರುಷೆನ್ನೇ ಟಾರ್ಗೆಟ್ ಮಾಡಿ ಮಾದುವೆಯಾಗಿ ಸ್ವಲ್ಪ ದಿನಕ್ಕೆಯೇ ದುಡ್ಡು ಬಂಗಾರವನ್ನು ಎತ್ತಿಕೊಂಡ ಎಸ್ಕೇಪ್ ಆಗುತ್ತಿದ್ದಳು. ಹೀಗೆ ಡಿವೈಎಸ್ಪಿ, ಎಸ್ಪಿ, ಉದ್ಯಮಿಗಳು ಸೇರಿದಂತೆ 50 ಜನರಿಗೆ ವಂಚಿಸಿದ್ದಾಳೆ. ಇದೀಗ ಆಕೆಯ ಮೋಸದಾಟ ಬಯಲಾಗಿದ್ದು, ಪೊಲೀಸರ ಅತಿಥಿಯಾಗಿದ್ದಾಳೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA