ವಿಶ್ವದ ಶ್ರೀಮಂತ ಉದ್ಯಮಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಜೀವನ ಶೈಲಿ ಎಷ್ಟು ದುಬಾರಿ ಎಂದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ. ಮುಕೇಶ್ ಅಂಬಾನಿ ಮುಂಬೈನಲ್ಲಿರುವ ತಮ್ಮ ಐಷಾರಾಮಿ ಮನೆ ಆಂಟಿಲಿಯಾದಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ.
ಅಂದಾಜು 15,000ಕೋಟಿ ರೂ.ಗಳ , 27 ಅಂತಸ್ತಿನ ಆಯಂಟಿಲಿಯಾ ಹೆಸರಿನ ಈ ಅರಮನೆ ವಿಶ್ವದ ಅತ್ಯಂತ ದುಬಾರಿ ಮನೆಗಳಲ್ಲಿ ಒಂದಾಗಿದೆ. ಹಾಗಾದರೆ ಈ ಭವ್ಯ ಅರಮನೆಯ ತಿಂಗಳೊಂದರ ವಿದ್ಯುತ್ ಬಿಲ್ ಎಷ್ಟಿರಬಹುದು?
2010ರಲ್ಲಿ ಆಯಂಟಿಲಿಯಾದ ಮೊದಲ ತಿಂಗಳ ವಾಸದ ವಿದ್ಯುತ್ ಬಿಲ್ಲೇ ಬರೋಬ್ಬರಿ 70 ಲಕ್ಷ ರೂಪಾಯಿಗಳು. ಆ ನಂತರದಲ್ಲೂ ಹೆಚ್ಚೂ ಕಡಿಮೆ 70 ಲಕ್ಷದಿಂದ 1 ಕೋಟಿವರೆಗೆ 1 ತಿಂಗಳ ವಿದ್ಯುತ್ ಬಿಲ್ ಬರುತ್ತದೆ.
ವರದಿಯ ಪ್ರಕಾರ, ಮುಖೇಶ್ ಅಂಬಾನಿ ಅವರ ಐಷಾರಾಮಿ ಆಯಂಟಿಲಿಯಾ ತಿಂಗಳಿಗೆ ಸುಮಾರು 6,37,240 ಯೂನಿಟ್ ವಿದ್ಯುತ್ ಅನ್ನು ಬಳಸುತ್ತದೆ. ಈ ಮನೆಯ ಒಳಾಂಗಣಗಳಷ್ಟೇ ಅಲ್ಲ, ಆರು ಮಹಡಿಗಳಲ್ಲಿ ಹರಡಿರುವ ಕಾರ್ ಪಾರ್ಕಿಂಗ್ ಸ್ಥಳವೂ ಹವಾನಿಯಂತ್ರಿತವಾಗಿದೆ. ಇನ್ನು, ಜಗತ್ತಿನ ಎಲ್ಲಾ ಐಶಾರಾಮಿ ವಿದ್ಯುತ್ ಉಪಕರಣಗಳೂ ಇಲ್ಲಿರುತ್ತವೆ ಎಂಬುದರಲ್ಲಿ ಅನುಮಾನವಿಲ್ಲ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


