ಅನಂತ್ ಅಂಬಾನಿ ಮದುವೆ ಮುಗಿದರೂ ವಿವಾಹನ ನಂತರದ ಕಾರ್ಯಕ್ರಮಗಳು ಇನ್ನೂ ನಡೆಯುತ್ತಲೇ ಇದೆ. ಅನಂತ್ ಅಂಬಾನಿ–ರಾಧಿಕಾ ಮರ್ಚೆಂಟ್ ಮದುವೆ ಅದ್ಧೂರಿಯಾಗಿ ನಡೆದಿದೆ. ಬಾಲಿವುಡ್ ತಾರೆಗಳು ಸೇರಿದಂತೆ ಅನೇಕ ರಂಗದ ಗಣ್ಯರು ಈ ಅದ್ಧೂರಿ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.
ಮದುವೆಗೆ ಆಗಮಿಸಿದ ಅನಂತ್ ಅಂಬಾನಿಯ 25 ಖಾಸ್ ಗೆಳೆಯರಿಗೆ ಕೋಟಿ ಕೋಟಿ ಮೌಲ್ಯದ ಗಿಫ್ಟ್ ದೊರಕಿದೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ ವರ ಅನಂತ್ ತನ್ನ 25 ಅತ್ಯಾಪ್ತರಿಗೆ ಲಿಮಿಡೆಟ್ ಎಡಿಷನ್ Audemard Piguet ಕೈಗಡಿಯಾರ ನೀಡಿದ್ದಾರೆ ಎನ್ನಲಗಿದೆ. ಆರ್ಡರ್ ಕೊಟ್ಟು ವಿಶೇಷವಾಗಿರುವಂತಹ 25 ವಾಚ್ ಗಳನ್ನು ತರಿಸಲಾಗಿತ್ತು. ಇದರ ಬೆಲೆ ತಲಾ 1.5 ರಿಂದ 2 ಕೋಟಿ ರೂಪಾಯಿ ಆಗಿದೆ ಎನ್ನಲಾಗಿದೆ.
ಈ ವಾಚನ್ನು 18 ಕ್ಯಾರಟ್ ಚಿನ್ನದಿಂದ ತಯಾರಿಸಲಾಗಿದೆ. ಇದು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಮೂಲಗಳ ಪ್ರಕಾರ ಈ ಕೈ ಗಡಿಯಾರವನ್ನು ಮಿಜಾನ್ ಜಾಫರಿ, ವೀರ್ ಪಹಾಡಿಯಾ, ಶಿಖರ್ ಫಹಾಡಿಯಾ, ಶಾರೂಖ್ ಖಾನ್, ರಣವೀರ್ ಸಿಂಗ್, ಹಾರ್ದಿಕ್ ಪಾಂಡ್ಯ ಸೇರಿ ಅತ್ಯಾಪ್ತರಿಗೆ ಮಾತ್ರ ನೀಡಲಾಗಿದೆಯಂತೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA