ಅತ್ಯಂತ ಭಾರವಾದ ಜೀವಿ ಅಂದರೆ ನೀಲಿ ತಿಮಿಂಗಿಲ. ಈ ಪ್ರಾಣಿಯ ಹೃದಯವು ವಿಶ್ವದಲ್ಲೇ ದೊಡ್ಡದಾಗಿದೆ ಎಂದು ನಿಮಗೆ ಗೊತ್ತು. ಅದರ ಹೃದಯದ ಉದ್ದ, ಅಗಲ ಮತ್ತು ತೂಕವನ್ನು ತಿಳಿದರೆ ನೀವು ಬೆಚ್ಚಿಬೀಳುತ್ತೀರಿ. ಈ ಬೃಹತ್ ತಿಮಿಂಗಿಲದ ಹೃದಯವನ್ನು ವಿಜ್ಞಾನಿಗಳು ಅಳೆದಿದ್ದಾರೆ. ಅವರು ನಿಜವಾಗಿಯೂ ತಿಮಿಂಗಿಲದ ಹೃದಯವು ಪ್ರಪಂಚದ ಯಾವುದೇ ಪ್ರಾಣಿಗಳಿಗಿಂತ ದೊಡ್ಡದಾಗಿದೆಯಾ ಎಂದು ಕಂಡುಹಿಡಿಯಲು ಪ್ರಯತ್ನಿಸಿದರು.
ನೀಲಿ ತಿಮಿಂಗಿಲದ ಹೃದಯ ಫೋಕ್ಸ್ ವ್ಯಾಗನ್ ಬೀಟಲ್ ಕಾರಿನ ಗಾತ್ರವಷ್ಟೇ ಇದೆ ಎಂದು ಅಧ್ಯಯನ ತಿಳಿಸಿದೆ. ಇದು 14 ಅಡಿ ಉದ್ದ, 06 ಅಡಿ ಅಗಲ, 05 ಅಡಿ ಎತ್ತರ ಎಂದು ಕೆಲವರು ಹೇಳುತ್ತಾರೆ. ತಿಮಿಂಗಿಲವನ್ನು ಸಾಮಾನ್ಯವಾಗಿ 40,000 ಪೌಂಡ್ ಗಳ ತೂಕ ಎಂದು ಪರಿಗಣಿಸಲಾಗುತ್ತದೆ. ಆದರೆ ಅದರ ಹೃದಯವು 400 ಪೌಂಡ್ ಗಳ ತೂಕವನ್ನು ಹೊದಿದೆ. ಆದರೆ ಈ ಭೂಮಿಯ ಮೇಲಿನ ಯಾವ ಪ್ರಾಣಿಗೂ ಅಷ್ಟು ದೊಡ್ಡ ಹೃದಯವಿಲ್ಲ ಎಂದು ಅಧ್ಯಯನವು ತಿಳಿಸುತ್ತದೆ.
ಕೆನಡಾದ ಟೊರೊಂಟೊದಲ್ಲಿರುವ ರಾಯಲ್ ಒಂಟಾರಿಯೊ ಮ್ಯೂಸಿಯಂನಲ್ಲಿ ನೀಲಿ ತಿಮಿಂಗಿಲ ಹೃದಯಗಳಲ್ಲಿ ಒಂದನ್ನು ಪ್ರದರ್ಶಿಸಲಾಗಿದೆ. ಈ ಹೃದಯವು 5 ಅಡಿ ಉದ್ದ, 4 ಅಡಿ ಅಗಲ ಮತ್ತು 5 ಅಡಿ ಎತ್ತರವಿದೆ. ಇದರ ತೂಕ ಸುಮಾರು 190 ಕೆಜಿ. ಅದು ನಾಲ್ಕು ಅಥವಾ ಐದು ಜನರ ತೂಕಕ್ಕೆ ಸಮಾನವಾಗಿರುತ್ತದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA