1818 ಜನವರಿ 1 ರಂದು ನಡೆದ ಭೀಮ ಕೊರೆಗಾಂವ್ ಯುದ್ಧದ ಗೆಲುವಿಗೆ 204 ವರ್ಷ ತುಂಬಿದೆ. ಇದನ್ನು ಮೂರನೇ ಆಂಗ್ಲೋ ಮರಾಠ ಯುದ್ಧ ಎಂದೂ ಕರೆಯುತ್ತಾರೆ. ಈ ಯುದ್ಧ ಪೇಶ್ವೆ ಎರಡನೇ ಬಾಜಿರಾವ್ ಮತ್ತು ಈಸ್ಟ್ ಇಂಡಿಯಾ ಕಂಪನಿ ನಡುವಿನ ಯುದ್ಧವಾಗಿರುತ್ತದೆ.
28,000 ಸೈನಿಕರುಳ್ಳ ಬಲಿಷ್ಠ ಮರಾಠ ಸೇನೆಯನ್ನು 500ರಿಂದ 800 ಸೈನಿಕರುಳ್ಳ ಈಸ್ಟ್ ಇಂಡಿಯಾ ಕಂಪನಿ ಸೋಲಿಸಿ ವಿಜಯ ಪತಾಕೆ ಹಾರಿಸಿತ್ತು. ಬ್ರಿಟೀಷರ ಈ ಸೈನ್ಯದಲ್ಲಿ ಹೆಚ್ಚಿನವರು ಮಹರ್ ಜನಾಂಗದವರಾಗಿಯೇ ಇದ್ದರು. ಅಂದಿನ ಕಾಲದಲ್ಲಿ ಮಹರ್ ಜನಾಂಗದವರನ್ನು ಅಸ್ಪೃಶ್ಯರಂತೆ ಕಾಣಲಾಗುತ್ತಿತ್ತು. ಪೇಶ್ವೆಗಳ ಸೇನೆಯಲ್ಲಿ ಮೇಲ್ಜಾತಿಯವರೇ ತುಂಬಿದ್ದರು.
ಆಗ ನಡೆಯುತ್ತಿದ್ದ ಮೇಲು ಕೀಳಿನ ಮನೋಭಾವದಿಂದ ನೊಂದಿದ್ದ ಮಹರ್ ಜನರು ಈ ಗೆಲುವನ್ನು ಮೇಲ್ಜಾತಿಯವರ ಮೇಲಿನ ಕೆಳಜಾತಿಯವರ ಗೆಲುವೆಂದೆ ಪರಿಗಣಿಸಿದರು. ಈ ಯುದ್ಧದಲ್ಲಿ ಈಸ್ಟ್ ಇಂಡಿಯಾ ಕಂಪನಿ ಸೈನ್ಯದ 50 ಜನ ಪ್ರಾಣತೆತ್ತರು.
ಅದರಲ್ಲಿ 22 ಜನ ಮಹರ್ ಆಗಿದ್ದರು, 16 ಜನ ಮರಾಠಿಗರು, 8 ಜನ ರಜಪೂತರು, ಇಬ್ಬರು ಮುಸ್ಲಲ್ಮಾನರು ಮತ್ತು ಇಬ್ಬರು ಜೂಯಿಸ್ ಸಮುದಾಯಕ್ಕೆ ಸೇರಿದವರಾಗಿದ್ದರು. ಈ ಯುದ್ಧದಲ್ಲಿ ಪ್ರಾಣಕಳೆದುಕೊಂಡವರ ನೆನಪಿನಲ್ಲಿ ಬ್ರಿಟಿಷ್’ನವರು ಭೀಮ ಕೊರೆಗಾಂವ್’ನಲ್ಲಿ ” ವಿಜಯ ಸ್ತಂಭ ” ವನ್ನು ಸ್ಥಾಪಿಸಿದರು.
ಈ ಯುದ್ಧದಲ್ಲಿ ಸೋತ ಮರಾಠರ ಸೋಲು ಒಂದು ರೀತಿಯಲ್ಲಿ ಭಾರತಕ್ಕೆ ಆದ ಹಿನ್ನಡೆಯೇ. ಆದರೆ ಆಗಿನ ಕಾಲದ ಮಹರ್ ಅಥವಾ ದಲಿತರ ಮೇಲಿನ ದಬ್ಬಾಳಿಕೆಗೆ ಒಂದು ತಕ್ಕ ಮಟ್ಟಿಗಿನ ತಡೆಯನ್ನು ಈ ಯುದ್ಧದ ಮುಖಾಂತರ ತಂದೊಡ್ಡಲಾಗಿತು.
ಈ ಗೆಲುವು ಮಹರ್ ಜನಾಂಗಕ್ಕೆ ಸೈನ್ಯದಲ್ಲಿ ಉತ್ತಮ ಸ್ಥಾನಮಾನ ಸಿಗುವಲ್ಲಿ ಪ್ರಮುಖ ಪಾತ್ರ ವಹಿಸಿತು. ಏನೇ ಆಗಲಿ ಈ ಘಟನೆ ನಡೆದು ಇಂದಿಗೆ 204 ವರ್ಷ ತುಂಬಿದರೂ ಘಟನೆಯ ವಿಚಾರ ಮಾತ್ರ ಇನ್ನೂ ಹೊಸದರಂತೆ ಕಾಣಿಸುತ್ತಿದೆ.
ವರದಿ: ವೆಂಕಟೇಶ ಜೆ.ಎಸ್ ( ವಿಕ್ಕಿ ) ಮಾಯಸಂದ್ರ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy