ಇನ್ಮುಂದೆ ಜೊಮ್ಯಾಟೋನಲ್ಲಿ ಆರ್ಡರ್ ಹಿಸ್ಟರಿಯನ್ನು ಡಿಲೀಟ್ ಮಾಡುವ ಆಯ್ಕೆಯನ್ನು ಗ್ರಾಹಕರಿಗೆ ನೀಡಲಾಗಿದೆ. 2023ರಲ್ಲಿ ಕರಣ್ ಸಿಂಗ್ ಸೇರಿದಂತೆ ಹಲವು ಬಳಕೆದಾರು ಆರ್ಡರ್ ಹಿಸ್ಟರಿ ಡಿಲೀಟ್ ಮಾಡುವ ಆಯ್ಕೆಯನ್ನು ಆಪ್ ನಲ್ಲಿ ಒದಗಿಸಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಇದೀಗ ಜೊಮ್ಯಾಟೋ ಸಿಇಓ ದೀಪೇಂದ್ರ ಗೋಯಲ್ , ತಮ್ಮ ಆಪ್‌ನಲ್ಲಿ ಹೊಸ ಫೀಚರ್ ಸೇರಿಸಲಾಗಿದೆ ಎಂದು ಘೋಷಣೆ ಮಾಡಿದ್ದಾರೆ. ಎಂಟು ತಿಂಗಳ ಬಳಿಕ ಫುಡ್ ಆರ್ಡರ್ ಹಿಸ್ಟರಿ ಡಿಲೀಟ್ ಆಯ್ಕೆಯನ್ನು ಗ್ರಾಹಕರಿಗೆ ಒದಗಿಸಲಾಗಿದೆ. ಜುಲೈ 12ರಂದು ದೀಪೇಂದ್ರ ಗೋಯಲ್ ಎಕ್ಸ್ ಖಾತೆಯ ಮೂಲಕ ಡಿಲೀಟ್ ಆಯ್ಕೆಯ ಸೇರಿಸಿರುವ ಮಾಹಿತಿಯನ್ನು ನೀಡಿದ್ದಾರೆ.
ಮಾಹಿತಿ ನೀಡುವ ಸಂದರ್ಭದಲ್ಲಿ ಕರಣ್ ಸಿಂಗ್ ಹೆಸರನ್ನು ಉಲ್ಲೇಖಿಸಿ ದೀಪೇಂದ್ರ ಗೋಯಲ್ ವಿಷಯವನ್ನು ಹಂಚಿಕೊಂಡಿದ್ದು, ಹೊಸ ಆಯ್ಕೆ ಸೇರಿಸಲು ತಾಂತ್ರಿಕ ಕಾರಣಗಳಿಂದ ವಿಳಂಬವಾಯ್ತು. ಈ ಹೊಸ ಫೀಚರ್ ಎಲ್ಲಾ ಗ್ರಾಹಕರಿಗೆ ಲಭ್ಯವಾಗಲಿದ ಎಂದು ದೀಪೇಂದ್ರ ಗೋಯಲ್ ಹೇಳಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA