ಇತ್ತೀಚೆಗೆ ಪ್ರತಿಷ್ಠಿತ ಕುಟುಂಬಗಳ ಮಕ್ಕಳು ಐಷಾರಾಮಿ ಕಾರನ್ನು ಅಡ್ಡಾದಿಡ್ಡಿ ಚಲಾಯಿಸಿ ಅಮಾಯಕರ ಸಾವಿಗೆ ಕಾರಣವಾದ ಘಟನೆಗಳು ವ್ಯಾಪಕ ಚರ್ಚೆಗೆ ಗ್ರಾಸವಾಗುತ್ತಿವೆ. ಈ ನಡುವೆ, 2016ರಲ್ಲಿ ನಡೆದಿದ್ದ ಇದೇ ರೀತಿಯ ಪ್ರಕರಣದಲ್ಲಿ, ಅಪ್ರಾಪ್ತನೊಬ್ಬ ಚಲಾಯಿಸುತ್ತಿದ್ದ ಕಾರಿಗೆ ಬಲಿಯಾಗಿದ್ದ 32 ವರ್ಷದ ವ್ಯಕ್ತಿಯ ಪೋಷಕರಿಗೆ 1.98 ಕೋಟಿ ರೂ. ಪರಿಹಾರ ಕಾರು ಮಾಲಕನ ಕಡೆಯಿಂದ ನೀಡುವಂತೆ ವಿಮಾ ಕಂಪೆನಿಗೆ ಕೋರ್ಟ್ ಆದೇಶಿಸಲಾಗಿದೆ.
ದಿಲ್ಲಿಯ ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿ (ಎಂಎಸಿಟಿ) ಈ ಆದೇಶ ಪ್ರಕಟಿಸಿದೆ. ಅಪಘಾತದಲ್ಲಿ ಬಲಿಯಾದ ಸಿದ್ಧಾರ್ಥ್ ಶರ್ಮಾ ಪೋಷಕರಿಗೆ 30 ದಿನಗಳ ಒಳಗೆ 1.21 ಕೋಟಿ ರೂ ಪರಿಹಾರ ಹಾಗೂ ಸುಮಾರು 77.61 ಲಕ್ಷ ರೂ ಸೇರಿದಂತೆ 1.98 ಕೋಟಿ ರೂ ಹಣ ಪಾವತಿಸುವಂತೆ ನ್ಯಾಯಮಂಡಳಿ ನಿರ್ದೇಶಿಸಿದೆ.
2016ರ ಏಪ್ರಿಲ್ 4ರಂದು ದಿಲ್ಲಿಯ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ಅಪ್ರಾಪ್ತ ವಯಸ್ಕ ಚಲಾಯಿಸುತ್ತಿದ್ದ ಮರ್ಸಿಡಿಸ್ ಕಾರು ಡಿಕ್ಕಿ ಹೊಡೆದು 32 ವರ್ಷದ ಸಿದ್ಧಾರ್ಥ್ ಶರ್ಮಾ ಜೀವ ಕಳೆದುಕೊಂಡಿದ್ದರು. ಈ ಭಯಾನಕ ಅಪಘಾತದ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA