ಕ್ರೈಸ್ತ ಪ್ರಾರ್ಥನಾ ಸಭೆಯೊಂದು ನಡೆಯುತ್ತಿದ್ದ ಮನೆಯೊಂದಕ್ಕೆ ದಾಳಿ ನಡೆಸಿದ ಸಂಘ ಪರಿವಾರದ ಕಾರ್ಯಕರ್ತರು ಮನೆಯಲ್ಲಿದ್ದ ಕನಿಷ್ಠ ಏಳು ಮಂದಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಘಟನೆ ಡೆಹ್ರಾಡೂನ್ ನಲ್ಲಿ ನಡೆದಿದೆ. ಅಲ್ಲಿದ್ದವರ ವಿರುದ್ಧ ಸಂಘ ಪರಿವಾರದ ಸದಸ್ಯರು ಮತಾಂತರದ ಆರೋಪ ಮಾಡಿದ್ದಾರೆ ಎನ್ನಲಾಗಿದೆ. ಈ ಪ್ರಾರ್ಥನಾ ಸಭೆ ದೀಕ್ಷಾ ಪೌಲ್ ಎಂಬವರ ಮನೆಯಲ್ಲಿ ನಡೆಯುತ್ತಿತ್ತು.
ದೀಕ್ಷಾ ಅವರ ಪತಿ ರಾಜೀಶ್ ಹರಿದ್ವಾರ್ ನಲ್ಲಿ ಹೋಟೆಲ್ ನಡೆಸುತ್ತಿದ್ದಾರೆ. ಘಟನೆ ಸಂಬಂಧ ನೆಹ್ರೂ ಕಾಲನಿ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದ್ದು, ಸಂಘ ಪರಿವಾರದ 11 ಮಂದಿ ವಿರುದ್ಧ ಕೇಸ್ ದಾಖಲಾಗಿದೆ.
ತಮ್ಮ ಮನೆ ಮೇಲೆ ದಾಳಿ ನಡೆಸಿದ ಗುಂಪಿನ ನೇತೃತ್ವವನ್ನು ದೇವೇಂದ್ರ ದೋಭಲ್ ಎಂಬವರು ವಹಿಸಿದ್ದರು ಎಂದು ದೀಕ್ಷಾ ಆರೋಪಿಸಿದ್ದಾರೆ. ಈ ವ್ಯಕ್ತಿಯ ಫೇಸ್ಬುಕ್ ಪ್ರೊಫೈಲ್ ಪ್ರಕಾರ ಈತ ಮಾಜಿ ಸೈನಿಕ ಹಾಗೂ ಆರೆಸ್ಸೆಸ್ ಸದಸ್ಯ ಎನ್ನಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA