ಭಾರತ ಮತ್ತು ಪಾಕಿಸ್ತಾನ ಯುದ್ಧದಲ್ಲಿ ಬಳಕೆ ಮಾಡಲಾದ ದೊಡ್ಡ ಪ್ರಮಾಣದ ಮಾರ್ಟರ್ ಶೆಲ್ ಗಳನ್ನು ಕೆರೆಯೊಳಗೆ ಪತ್ತೆ ಮಾಡಲಾಗಿದೆ. ಬಾಂಗ್ಲಾದೇಶದ ವಿಮೋಚನೆಗಾಗಿ ಈ ಯುದ್ಧ ನಡೆದಿತ್ತು.
ತ್ರಿಪುರಾ ಜಿಲ್ಲೆಯ ರಂಗೂತಿಯ ಪ್ರದೇಶದಲ್ಲಿ ಮೀನುಗಾರಿಕೆ ಹೊಂಡವೊಂದರಲ್ಲಿ ಇದು ಪತ್ತೆಯಾಗಿದೆ. ಆರಂಭದಲ್ಲಿ ಈ ಶೆಲ್ ಗಳು ಕೆನಾನ್ ನಲ್ಲಿದ್ದವೇ ಅಥವಾ ಮೋರ್ಟರ್ ಗಳಲ್ಲಿದ್ದವೇ ಎನ್ನುವುದು ಸ್ಪಷ್ಟವಾಗಿರಲಿಲ್ಲ. ಬಳಿಕ ಇದು ಮಾರ್ಟರ್ ಶೆಲ್ ಎಂದು ದೃಢಪಡಿಸಲಾಗಿದೆ.
ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮತ್ತು ಇಎಸ್ ಆರ್ ಸಿಬ್ಬಂದಿಯ ನೆರವಿನೊಂದಿಗೆ ಬಮೂತಿಯಾ ಹೊರಠಾಣೆಯ ಬಳಿ ನಡೆಯುತ್ತಿರುವ ಉತ್ಖನನದ ಬಳಿಗೆ ಆಗಮಿಸಿದ್ದಾರೆ, ಒಟ್ಟು 27 ಮಾರ್ಟರ್ ಶೆಲ್ ಗಳು ಪತ್ತೆಯಾಗಿವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA