ಔರಾದ: ಸರಕಾರ ಮತ್ತು ಸಮಾಜದ ಕೊಂಡಿಯಾಗಿ ಪತ್ರಿ ಕೆಗಳು ಕೆಲಸ ಮಾಡುತ್ತಿವೆ ಅದೇ ಕಾರಣಕ್ಕೆ ಮಾಧ್ಯಮಗಳ ಪಾತ್ರ ಸಮಾಜದಲ್ಲಿ ಬಹುಮುಖ್ಯವಾಗಿದೆ ಎಂದು ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಹೇಳಿದರು.
ಔರಾದ ಪಟ್ಟಣದ ತಾಲೂಕು ಪಂಚಾಯತ ಸಭಾಂಗಣದಲ್ಲಿ ಶುಕ್ರವಾರ ಕನಾ೯ಟಕ ಕಾಯ೯ನಿರತಪತ್ರ ಕತ೯ರ ಸಂಘದಿಂದ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಜನರಲ್ಲಿ ಆತ್ಮವಿಶ್ವಾಸ ಮೂಡಿಸುವಲ್ಲಿ ಪ್ರಮುಖ ಪಾತ್ರವಹಿಸಿರುವ ಪತ್ರಿಕೆಗಳು ಸಮಾ ಜವನ್ನು ಕಾಡುತ್ತಿರುವ ಭ್ರಷ್ಟಾಚಾರ, ಮೂಢನಂಬಿಕೆಗಳ ವಿರುದ್ಧ ಜನಜಾಗೃತಿ ಉಂಟು ಮಾಡುವಲ್ಲಿ ಪ್ರಮುಖ ಪಾತ್ರವಹಿಸಿವೆ ಎಂದರು.

ಔರಾದ ತಾಲೂಕಿನ ಪತ್ರಕರ್ತರು ಗಡಿ ಭಾಗದ ಸಮಸ್ಯೆಗಳ ಬಗ್ಗೆ ಸುದ್ದಿಗಳು ಮಾಡುವ ಮೂಲಕ ಜನರ ಸಮಸ್ಯೆಗೆ ಸ್ಪಂದಿಸುತ್ತಿದ್ದಾರೆ ಎಂದು ಪತ್ರಕತ೯ರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸದ ಸಾಗರ ಖಂಡ್ರೆ ಮಾತನಾಡಿ. ಪತ್ರಕತ೯ರ ವರದಿ ಜನರ ಸಂವೇದನೆಗಳೊಂದಿಗೆ ಇರುವುದ ರಿಂದ ಸಮಾಜದಲ್ಲಿನ ಸೂಕ್ಷ್ಮ ತೆಗಳ ಬಗ್ಗೆ ಒಳ ನೋಟವಿರುತ್ತದೆ. ಪ್ರಶಸ್ತಿ ಪ್ರದಾನ ಈ ವೇಳೆ ಹಿರಿಯ ಪತ್ರಕರ್ತ ಸುಭಾಷ ಬಣಗಾರ ಅವರಿಗೆ ಲೇಖನಿ ತಪಸ್ವಿ. ಹಿರಿಯ ಪತ್ರಕರ್ತ ಭವಾನಿಸಿಂಗ್ ಠಾಕೂರ್ ಅವರಿಗೆ ಚೇತನ ಶ್ರೀ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಕಾಯ೯ಕ್ರಮದ ಅಧ್ಯಕ್ಷತೆ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮೊಕ್ತದಾರ್ ವಹಿಸಿ ಮಾತನಾಡಿದರು. ಪತ್ರಕತ೯ ಮನ್ಮಥ ಸ್ವಾಮಿ ಮಾತನಾಡಿದರು. ತಹಸೀಲ್ದಾರ್ ಮಲ್ಲಿಶೆಟ್ಟಿ ಚಿದ್ರೆ, ತಾಪಂ ಇಒ ಬಿರೇಂದ್ರ ಸಿಂಗ್ ಠಾಕೂರ್, ಸಹಾಯಕ ನಿದೇ೯ಶಕ ಶಿವಕುಮಾರ ಘಾಟೆ, ಪತ್ರಕತ೯ರಾದ ಶರಣಪ್ಪ ಚಿಟಮೇ, ಚನ್ನಬಸವ ವೊಕ್ತೆದಾರ್, ಸುನೀಲ್ ಜಿರೋಬೆ, ಅಮರೇಶ್ವರ ಚಿದ್ರೆ, ಅಮರ ಸ್ವಾಮಿ, ವಿಶ್ವನಾಥ ಬಿರಾದಾರ ಪತ್ರಕತ೯ರ ಕುರಿತು ಕವನ ಹೇಳಿದರು. ನೀಲಾಂಬಿಕಾ ಕುಂಬಾರ ಪ್ರಾಥ೯ನಾ ಗೀತೆ ಹಾಡಿದರು. ಪರಮೇಶ್ವರ ವಿಳಾಸಪೂರೆ ನಿರೂಪಿಸಿದರು. ರಿಯಾಜ್ ಪಾಶಾ ಸ್ವಾಗತಿಸಿ ವಂದಿಸಿದರು. ನಮ್ಮ ತುಮಕೂರು ಮಧ್ಯಮ ಬೀದರ ಜಿಲ್ಲಾ ವರದಿಗಾರ ಅರವಿಂದ ಮಲ್ಲಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


