ಸಿನಿಮಾಗಳ ಮೂಲಕ ಮಾತ್ರವಲ್ಲದೆ ಸೋಷಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿದ್ದು ಅಭಿಮಾನಿಗಳನ್ನು ಹುಚ್ಚೆಬ್ಬಿಸುವಲ್ಲಿ ಜಾನ್ವಿ ಕಪೂರ್ ಮೊದಲಿಗರು. ಜಾನ್ವಿಯ ಆ ಬೋಲ್ಡ್ ಲುಕ್ ಗಳಿಗೆ ಮಾರುಹೋಗದವರೇ ಇಲ್ಲ ಬಿಡಿ. ಆದರೀಗ ನಟಿ ಜಾನ್ವಿ ಮದುವೆ, ಬ್ರೇಕಪ್ ಕುರಿತು ಮಾತನಾಡಿರುವುದು ಸೋಷಿಯಲ್ ಮೀಡಿಯಾಗಳಲ್ಲಿ ಸೆನ್ಸೇಷನ್ ಕ್ರಿಕೆಟ್ ಮಾಡಿದೆ.
ಈ ಹಿಂದೆ ಜಾನ್ವಿ ಕಪೂರ್ ಶಿಖರ್ ಶಿಂಧೆ ಜೊತೆ ಸಂಬಂಧ ಹೊಂದಿದ್ದಾರೆ ಎಂಬ ವರದಿಗಳು ಬಂದಿದ್ದವು. ಶಿಖರ್ ಶಿಂಧೆ ಮಹಾರಾಷ್ಟ್ರ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ. ಜಾನ್ವಿ ಕಪೂರ್ ಅವರೊಂದಿಗೆ ಕೆಲವು ವರ್ಷಗಳ ಕಾಲ ಡೇಟಿಂಗ್ ಮಾಡುತ್ತಿದ್ದರು. ಆದರೆ ನಂತದಲ್ಲೀ ಜಾನ್ವಿ ಕಪೂರ್ ನಂತರ ಶಿಖರ್ ಶಿಂಧೆ ಜೊತೆ ಬ್ರೇಕಪ್ ಮಾಡಿಕೊಂಡಿದ್ದರು. ಇದೀಗಷ ಈ ಕುರಿತು ನಟಿ ಜಾಹ್ನವಿ ಕಪೂರ್ ಮನ ಬಿಚ್ಚಿ ಮಾತನಾಡಿದ್ದಾರೆ. ಪಿರಿಯಡ್ಸ್‌ನಿಂದ ಲವ್ ಬ್ರೇಕ್ ಆಗಿತ್ತು ಎಂದು ಹೇಳಿದ್ದಾರೆ.
ಮುಟ್ಟಿನ ಆರಂಭದಲ್ಲಿ ನನ್ನ ಮನಸ್ಸಿ ಹಿಡಿತಕ್ಕೆ ಸಿಗುತ್ತಿರಲಿಲ್ಲ. ಪ್ರತಿ ತಿಂಗಳ ಮುಟ್ಟಿನ ವೇಳೆ ಲವ್ ಬ್ರೇಕ್ ಅಪ್ ಆಗುತ್ತಿತ್ತು. ಪ್ರತಿ ತಿಂಗಳು ಈ ರೀತಿ ಯಾಕೆ ಅನ್ನೋದೇ ತಿಳಿಯದಾಗಿತ್ತು. ಈ ಸಂದರ್ಭವನ್ನು ಎದುರಿಸಲು ಕಷ್ಟವಾಗುತ್ತಿತ್ತು. ಮುಟ್ಟಿನ ಸಂದರ್ಭದಲ್ಲಿ ಈ ಪ್ರೀತಿ ಯಾಕೆ ? ಬ್ರೇಕ್ ಅಪ್ ಮಾಡಿಕೊಳ್ಳಬೇಕು ಎನಿಸುತ್ತಿತ್ತು. ಹೀಗಾಗಿ ಆತನೊಂದಿಗೆ ಬ್ರೇಕ್ ಮಾಡಿಕೊಳ್ಳುತ್ತಿದ್ದೆ. ಮುಟ್ಟಾದ ಕೆಲ ದಿನಗಳ ವರೆಗೆ ನನ್ನ ಯಾವುದರಲ್ಲಿ ಆಸಕ್ತಿ ಇಲ್ಲದೆ ಮೂಡಿಯಾಗಿರುತ್ತಿದ್ದೆ. ಹೀಗಾಗಿ ಆತನೊಂದಿಗೆ ಬ್ರೇಕ್ ಅಪ್ ಮಾಡಿಕೊಳ್ಳುತ್ತಿದೆ.
ಮುಟ್ಟಿನ ಪರಿಣಾನ ನನ್ನಲ್ಲಿ ಹಲವು ಬದಲಾವಣೆ ತರುತ್ತಿತ್ತು. ಕನಿಷ್ಠ 2 ರಿಂದ 3 ತಿಂಗಳು ಸಮಸ್ಯೆ ಎದುರಾಗುತ್ತಿತ್ತು. ವಿಪರ್ಯಾಸ ಎಂದರೆ ಪ್ರತಿ ತಿಂಗಳ ಮುಟ್ಟಿನ ವೇಳೆ ಇದೇ ರೀತಿ ಆಗುತ್ತಿತ್ತು. ಬಳಿಕ ಕೊಂಚ ಸುಧಾರಿಸಿಕೊಂಡ ಬಳಿಕ ಮತ್ತೆ ಆತನ ಬಳಿ ಸಾರಿ ಕೇಳುತ್ತಿದ್ದೆ. ಆರಂಭಿಕ ಕೆಲ ವರ್ಷಗಳ ಕಾಲ ಹೀಗೆ ಮಂದುವರಿದಿತ್ತು. ಮುಟ್ಟು ಎಂದರೆ ಮಾನಸಿಕವಾಗಿ ಕುಗ್ಗಿ ಹೋಗಿದ್ದೆ. ವ್ಯತಿರಿಕ್ತ ಪರಿಣಾಮ ಸಂಬಂಧದ ಮೇಲೆ ಬಿರುಕು ಮೂಡುವಂತೆ ಮಾಡಿತ್ತು ಎಂದು ಜಾಹ್ನವಿ ಕಪೂರ್ ಹೇಳಿದ್ದಾರೆ.
ಅಲ್ಲದೆ ಬ್ರೇಕಪ್ ಆದ ನಂತರ ನನ್ನ ದೇಹದಲ್ಲಿ ಹಾರ್ಮೋನ್ ಚೇಂಜ್ ಆಗಿದ್ದು ಎರಡು ಮೂರು ತಿಂಗಳ ಕಾಲ ಆಗಿರಲಿಲ್ಲ. ನನ್ನ ಮನಸ್ಸು ಯಾಕೆ ಆ ರೀತಿ ಯೋಚಿಸುತ್ತಿದೆ ಎಂದು ಗೊತ್ತಾಗದೆ ತುಂಬಾ ನೊಂದಿದ್ದೆ.. ಈಗ ಎಲ್ಲವೂ ಚೆನ್ನಾಗಿದೆ ಎಂದು ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA