ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುವ ಕೆಲವೊಂದು ವಿಡಿಯೋಗಳು ಮೈ ನಡುಕ ಹುಟ್ಟಿಸುತ್ತವೆ. ಅಂತೆಯೇ ಇದೀಗ ನಾವು ಹೇಳ ಹೊರಟಿರುವ ವಿಡಿಯೋ ಕೂಡ ಇದಕ್ಕೇ ಸಂಬಂಧಿಸಿದ್ದು.
ಬಯಲು ಶೌಚಕ್ಕೆಂದು ಪೊದೆಯ ಬಳಿ ಹೋಗಿ ಕುಳಿತ ವ್ಯಕ್ತಿಯೊಬ್ಬನ ಮೇಲೆ ದೈತ್ಯ ಹೆಬ್ಬಾವೊಂದು ಅಟ್ಯಾಕ್ ಮಾಡಿದೆ. ಅಷ್ಟೇ ಅಲ್ಲದೆ ಅವನನ್ನು ನುಂಗಲು ಯತ್ನಿಸಿದೆ. ಕೊನೆಗೆ ಆ ವ್ಯಕ್ತಿಯನ್ನು ಸುತ್ತುವರಿದಿದ್ದ ಹೆಬ್ಬಾವನ್ನು ಕೊಂದು, ಗ್ರಾಮಸ್ಥರು ವ್ಯಕ್ತಿಯನ್ನು ರಕ್ಷಣೆ ಮಾಡಿದ್ದಾರೆ. ಈ ಭೀಕರ ದೃಶ್ಯ ನೋಡುಗರನ್ನು ಬೆಚ್ಚಿ ಬೀಳಿಸಿದೆ.
ಅಂದಹಾಗೆ ಕೃಷ್ಣ ಬಿಹಾರಿ ಸಿಂಗ್ ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ 13 ಅಡಿ ಉದ್ದದ ಹೆಬ್ಬಾವು ಶೌಚಕ್ಕೆ ಕುಳಿತ ವ್ಯಕ್ತಿಯ ಕುತ್ತಿಗೆಯನ್ನು ಸುತ್ತುವರೆದ ದೃಶ್ಯವನ್ನು ಕಾಣಬಹುದು. ಹೀಗೆ ಬಿಟ್ಟರೇ ಹಾವು ಆ ವ್ಯಕ್ತಿಯನ್ನೇ ಜೀವಂತವಾಗಿ ನುಂಗಿಬಿಡುತ್ತೇ ಎಂದು ಭಾವಿಸಿದ ಸ್ಥಳೀಯರು ಬೇರೆ ದಾರಿ ತೋರದೆ, ಕೊಡಲಿ ಏಟು ಕೊಟ್ಟು ಹೆಬ್ಬಾವನ್ನು ಸಾಯಿಸಿ ಆ ವ್ಯಕ್ತಿಯ ಪ್ರಾಣ ರಕ್ಷಣೆ ಮಾಡಿದ್ದಾರೆ.
ಇನ್ನು ಜುಲೈ 22 ರಂದು ಹಂಚಿಕೊಳ್ಳಲಾದ ಈ ವಿಡಿಯೋ 3 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಜನರಂತೂ ಬಗೆಬಗೆಯಾಗಿ ಕಮೆಂಟ್ ಮಾಡುತ್ತಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA