ಮನೆ ಹಿತ್ತಲಿನಲ್ಲಿ ಕಾಣಿಸಿಕೊಂಡ ಬೃಹತ್ ಗಾತ್ರದ 13 ಅಡಿ ಉದ್ದದ ಹೆಬ್ಬಾವನ್ನು ಉರಗ ತಜ್ಞ ದಿಲೀಪ್ ಸೆರೆಹಿಡಿದು ದೇವರಾಯನದುರ್ಗ ಅರಣ್ಯಕ್ಕೆ ಬಿಟ್ಟಿದ್ದಾರೆ.
ತುಮಕೂರು ತಾಲೂಕು ಅಯ್ಯನಪಾಳ್ಯ ಗ್ರಾಮದ ಪುಟ್ಟಯ್ಯ ಎಂಬುವರ ಮನೆ ಹಿತ್ತಲಿನಲ್ಲಿ ಹೆಬ್ಬಾವು ಪ್ರತ್ಯಕ್ಷವಾಗಿತ್ತು. ಹುಲ್ಲನ್ನು ಕುಯ್ಯಲು ಹೋದ ಪುಟ್ಟಯ್ಯ ಬೃಹತ್ ಗಾತ್ರದ ಹೆಬ್ಬಾವನ್ನು ಕಂಡು ಭಯಬೀತರಾಗಿದ್ದಾರೆ.
ತಕ್ಷಣ ತುಮಕೂರಿನ ವಾರಂಗಲ್ ವಾನ್ಯಜೀವಿ ಜಾಗೃತ ಹಾಗೂ ಉರಗ ರಕ್ಷಣಾ ಸಂಸ್ಥೆಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಉರಗ ತಜ್ಞ ದಿಲೀಪ್ ಮತ್ತು ಹನುಮಯ್ಯ ಅರ್ಧ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ 13 ಅಡಿ ಉದ್ದದ ಹೆಬ್ಬಾವನ್ನು ಸೆರೆಹಿಡಿದಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ವಾರಂಗಲ್ ವನ್ಯಜೀವಿ ಜಾಗೃತ ಹಾಗೂ ಉರಗ ರಕ್ಷಣಾ ಸಂಸ್ಥೆ ಯವರು ರಕ್ಷಣೆ ಮಾಡಿದ್ದ ಹೆಬ್ಬಾವ ಹಾವನ್ನು ದೇವರಾಯನದುರ್ಗ ಅರಣ್ಯಕ್ಕೆ ಬಿಟ್ಟಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA