ಲಕ್ನೋ: ರಸ್ತೆಯಲ್ಲಿ ಹರಿಯುತ್ತಿದ್ದ ನೀರು ಎರಚಿ ಮಹಿಳೆಗೆ ಕಿರುಕುಳ ನೀಡಿರುವ ಘಟನೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಠಾಣೆಯೊಂದರ ಎಲ್ಲ ಸಿಬ್ಬಂದಿಯನ್ನೂ ಅಮಾನತುಗೊಳಿಸಿರುವ ಘಟನೆ ನಡೆದಿದೆ.
ನೀರು ಹರಿಯುತ್ತಿದ್ದ ರಸ್ತೆಯಲ್ಲಿ ವಾಹನ ಚಲಾಯಿಸುತ್ತಾ ಬಂದ ವ್ಯಕ್ತಿ ಹಾಗೂ ಮಹಿಳೆಯ ಮೇಲೆ ಪುಂಡರ ತಂಡವೊಂದು ನೀರು ಎರಚಿದ್ದು, ಬಳಿಕ ಮಹಿಳೆಯನ್ನು ಬೈಕ್ ನಿಂದ ಬೀಳಿಸಿ, ಅಸಭ್ಯವಾಗಿ ಸ್ಪರ್ಶಿಸಿ ಎಬ್ಬಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದ ಪ್ರಶ್ನೆಗೆ ವಿಧಾನ ಸಭೆಯಲ್ಲಿ ಉತ್ತರಿಸಿದ ಸಿಎಂ ಯೋಗಿ ಆದಿತ್ಯನಾಥ್, ಪ್ರಕರಣಕ್ಕೆ ಸಂಬಂಧಿಸಿದಂತೆ ಇಡೀ ಪೊಲೀಸ್ ಠಾಣೆ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದು, ಘಟನೆಗೆ ಸಂಬಂಧಿಸಿದಂತೆ 16 ಆರೋಪಿಗಳನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಪವನ್ ಯಾದವ್, ಸುನಿಲ್ ಕುಮಾರ್ ಬಾರಿ, ಮೊಹಮ್ಮದ್ ಅರ್ಬಾಜ್, ವಿರಾಜ್ ಸಾಹು, ಅರ್ಜುನ್ ಅಗ್ರಿಹರಿ, ರತನ್ ಗುಪ್ತಾ, ಅಮನ್ ಗುಪ್ತಾ, ಅನಿಲ್ ಕುಮಾರ್, ಪಿಯಾನ್ಶು ಶರ್ಮಾ, ಆಶಿಶ್ ಸಿಂಗ್, ವಿಕಾಸ್ ಭಂಡಾರಿ, ಮನೀಶ್ ಕುಮಾರ್ ಸರೋಜ್, ಅಭಿಷೇಕ್ ತಿವಾರಿ, ಕೃಷ್ಣ ಕಾಂತ್ ಗುಪ್ತಾ, ಜೈ ಕಿಶನ್ ಮತ್ತು ಅಭಿಷೇಕ್ ಸಾಹು ಬಂಧಿತ ಆರೋಪಿಗಳಾಗಿದ್ದು, ಇವರ ವಿರುದ್ಧ ಗಂಭೀರವಾದ ಪ್ರಕರಣಗಳನ್ನು ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296