ಪ್ಯಾರಿಸ್ ಒಲಿಂಪಿಕ್ಸ್ ನ ಮಹಿಳಾ ಕುಸ್ತಿ ಪಂದ್ಯದಲ್ಲಿ ಫೈನಲ್ ತಲುಪಿದ್ದ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅವರು ಅಂತಿಮ ಕ್ಷಣದಲ್ಲಿ ಅನರ್ಹರಾಗಿದ್ದು, ಭಾರತೀಯ ಕ್ರೀಡಾಪ್ರೇಮಿಗಳಿಗೆ ಬಿಗ್ ಶಾಕ್ ಎದುರಾಗಿದೆ.
ವಿನೇಶ್ ಫೋಗಟ್ ಅವರ ದೇಹದ ತೂಕದಲ್ಲಿ 150 ಗ್ರಾಂ ಏರಿಕೆಯಾದ ಪರಿಣಾಮ ಒಲಿಪಿಂಕ್ಸ್ ನಿಯಮದ ಅನುಸಾರ ಅನರ್ಹಗೊಳಿಸಲಾಗಿದೆ. ಈ ಆಘಾತದ ಸುದ್ದಿಯ ಮಧ್ಯೆ ವಿನೇಶ್ ಫೋಗಟ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ವಿನೇಶ್ ಫೋಗಟ್ ಅವರು ನಿನ್ನೆ 50 ಕೆಜಿ ವಿಭಾಗದ ಮಹಿಳಾ ಕುಸ್ತಿ ಪಂದ್ಯದಲ್ಲಿ ಕ್ವಾರ್ಟರ್ ಫೈನಲ್ ಹಾಗೂ ಸೆಮಿಫೈನಲ್ ಪಂದ್ಯವನ್ನು ಆಡಿದ್ದರು. ಎರಡೂ ಪಂದ್ಯದಲ್ಲಿ ವೀರಾವೇಶದ ಆಟ ಪ್ರವೇಶಿಸಿದ್ದ ವಿನೇಶ್ ಫೈನಲ್ ಪ್ರವೇಶಿಸಿದ್ದರು. ಇಂದು ರಾತ್ರಿ 9.45ಕ್ಕೆ 50 ಕೆಜಿ ವಿಭಾಗದ ಕುಸ್ತಿ ಪಂದ್ಯ ಫೈನಲ್ ಪಂದ್ಯ ನಿಗದಿಯಾಗಿತ್ತು.
ನಿನ್ನೆ 50 ಕೆಜಿಗಿಂತ ಕಡಿಮೆಯೇ ತೂಕ ಇತ್ತು. ಕ್ವಾರ್ಟರ್ ಫೈನಲ್, ಸೆಮಿಫೈನಲ್ ಮುಗಿದ ಮೇಲೆ ನೀರು ಕುಡಿದಿದ್ದಾರೆ. ಇದರ ಜೊತೆಗೆ ಊಟ ಮಾಡಿದ ಮೇಲೆ ವಿನೇಶ್ ಪೋಗಟ್ ಅವರ ದೇಹದ ತೂಕದಲ್ಲಿ ಏರಿಕೆಯಾಗಿದೆ ಎನ್ನಲಾಗಿದೆ. ಈ ವಿಚಾರವನ್ನು ಮುಂದಿಟ್ಟುಕೊಂಡು ಅವರನ್ನು ಅನರ್ಹ ಮಾಡಲಾಗಿದೆ. ಇದು ದೊಡ್ಡ ಅನ್ಯಾಯ ಅಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296