ತುಮಕೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತುಮಕೂರು ಇಲ್ಲಿ ಜಷ್ನೇ ಎ. ಬಹಾರೆ ಎ ಉರ್ದು—2024 ಕಾರ್ಯಕ್ರಮವನ್ನು ಉರ್ದು ವಿಭಾಗದಿಂದ ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಅತಿಥಿ ಮೈಸೂರು ವಿ.ವಿ.ಯ ಉರ್ದು ವಿಭಾಗದ ನಿವೃತ್ತ ಮುಖ್ಯಸ್ಥ ಹಾಗೂ ಕಲಾನಿಕಾಯದ ಡೀನರಾಗಿದ್ದ ಪ್ರೊ. ಎಸ್.ಮಸೂದ್ ಸಿರಾಜ್ ಅವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ಭಾಷೆ ಒಂದು ಸಂವಹನ ಸಾಧನವಾಗಿದ್ದು, ಉರ್ದು ಭಾಷೆಯು ಅತ್ಯಂತ ಸೌಜನ್ಯಯುತವಾದ ಭಾಷೆಯಾಗಿದೆ. ವ್ಯಕ್ತಿ ಗೌರವಕ್ಕೆ ಅತ್ಯಂತ ಮಹತ್ವ ನೀಡುವಂತಹದ್ದಾಗಿದೆ. ಭಾಷಾ ಜ್ಞಾನವು ಭಾವನೆಗಳನ್ನು ಪ್ರಸರಿಸುವ ಪ್ರಮುಖ ಸಾಧನವಾಗಿದೆ. ಉರ್ದು ಭಾಷೆಯು ಹರಿತವಾದ ವಿಷಯವನ್ನು ಪ್ರೀತಿಯಿಂದ, ಗೌರವದಿಂದ ವ್ಯಕ್ತಪಡಿಸುವ ಪ್ರಮುಖವಾದ ಶ್ರೀಮಂತ ಭಾಷೆ ಎಂದು ಅಭಿಪ್ರಾಯಪಟ್ಟರು.
ಲಾಲ್ ಬಹದ್ದೂರು ಶಾಸ್ತ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರು ಹಾಗೂ ಉರ್ದು ವಿಭಾಗದ ಮುಖ್ಯಸ್ಥರಾದ ಮನ್ಸೂರು ನೋಮಾನ್ ರವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಾ, ಭಾಷೆಯು ಮಾನವ ವ್ಯಕ್ತಿತ್ವವನ್ನು ಸೂಚಿಸುವ ಪ್ರಮುಖ ಸಾಧನವಾಗಿದ್ದು, ಉರ್ದು ಭಾಷೆಯು ಹಲವು ಭಾಷೆಗಳ ಸಂಗವಾಗಿದೆ. ಉರ್ದು ಭಾಷೆಯು ಇಂದು ಬಳಸುವಲ್ಲಿ ನಾವು ವಿಭಿನ್ನ ಭಾಷೆಗಳನ್ನು ಪದಗಳ ಬಳಕೆಯನ್ನು ಗಮನಿಸಬಹುದು. ಹಲವು ಭಾಷಾ ಸಮೂಹದಿಂದ ಪದಗಳು ಸೇರಿ ಇಂದು ಉರ್ದು ಭಾಷೆಯು ಅತ್ಯಂತ ಪ್ರಬುದ್ಧ ಭಾಷೆಯಾಗಿ ಬೆಳೆದಿದೆ ಎಂದು ಅಭಿಪ್ರಾಯಪಟ್ಟರು.
ಸಾಲರ್ ಪತ್ರಿಕೆಯ ಸಂಪಾದಕರಾದ ಮುನೀರ್ ಅಹಮದ್ ಅವರು ಮಾತನಾಡುತ್ತಾ, ಉರ್ದು ಭಾಷೆಯು ಪಾಶ್ಚಾತ್ಯ ಭಾಚೆಯಾಗಿರದೇ ಇದು ದಕ್ಷಿಣ ಭಾರತದ ವ್ಯವಸ್ಥಿತ ಭಾಷೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಪ್ರೊ.ಗಂಗಾಧರ್ ಕನ್ನಡ ವಿಭಾಗದ ಮುಖ್ಯಸ್ಥರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾ, ಎಲ್ಲ ಭಾಷೆಗಳು ಸಹಜ ಜೀವನದ ಸಾಧನಗಳಾಗಿವೆ. ಇದರಲ್ಲಿ ಉರ್ದು ಭಾಷೆಯೂ ಒಂದಾಗಿದೆ ಎಂದರು.
ಸಂಸ್ಥೆಯ ಮುಖ್ಯಸ್ಥರಾದ ಪ್ರೊ.ತರುನುಂ ನಿಖತ್ ಅಧ್ಯಕ್ಷೀಯ ಭಾಷಣ ಮಾಡುತ್ತಾ, ಭಾಷೆಯು ಮೂಲ ಜೀವನದ ಕ್ರಮವಾಗಿದೆ. ಒಂದು ಭಾಷೆಯು ಉಳಿಯ ಬೇಕಾದರೆ ಅದರ ಬಳಕೆಯು ವ್ಯವಸ್ಥಿಯವಾಗಿರಬೇಕೆಂದು ತಿಳಿಸಿದರು. ವಿದ್ಯಾರ್ಥಿಗಳು ಸಾಕಷ್ಟು ಭಾಷೆಗಳಲ್ಲಿ ಪ್ರಾವಿಣ್ಯತೆ ಪಡೆದುಕೊಳ್ಳ ಬೇಕೆಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತುಗಳನ್ನು ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಅಶ್ಪಾಕ್ ಅಹ್ಮದ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಿ.ಸಿ.ಬಾರ್ಕರ್ ಪ್ರಾಚಾರ್ಯರು ಚಿತ್ರಕಲಾ ವಿಭಾಗ, ಮನೋಜ್ ಸಿ.ಆರ್, ಆಂಗ್ಲಾ ಭಾಷಾ ಮುಖ್ಯಸ್ಥರು, ಡಾ.ಯೋಗಿಶ್, ಗಣಿತ ಶಾಸ್ತ್ರ ಮುಖ್ಯಸ್ಥರು, ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.
ಡಾ.ಆಯಿಷಾ ಸಿದ್ದಿಕಾರವರು ಸ್ವಾಗತ ಕೋರಿದರು. ವಿದ್ಯಾರ್ಥಿನಿ ಸಾದಿಯಾರವರು ನಿರೂಪಿಸಿದರು. ಪ್ರೊ.ಹುಸ್ನು ಸುಲ್ತಾನ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನೆರವೇರಿಸಿದರು. ಡಾ.ಅಕ್ರಂ ಅಲಿ ಅವರು ವಂದಿಸಿದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296