ತಿಪಟೂರು: ತಾಲ್ಲೂಕಿನ ಬಿದರೆಗುಡಿಯ ಬಿದಿರಾಂಬಿಕಾ ದೇವಸ್ಥಾನದ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ‘ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ’ ಇವರ ಸಹಕಾರದೊಂದಿಗೆ ಸಾಮಾಜಿಕ ಅರಣ್ಯೀಕರಣದ ಅಡಿಯಲ್ಲಿ 2,000 ಸಸಿಗಳ ಗಿಡ ನಾಟಿ ಹಾಗೂ ತಾಲ್ಲೂಕಿನ ರೈತರಿಗೆ ಸಸಿ ವಿತರಣಾ ಕಾರ್ಯಕ್ರಮವನ್ನು ನಡೆಸಲಾಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಗೌರವಾನ್ವಿತ ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣರವರು ಧ.ಗ್ರಾ.ಯೋಜನೆಯು ಬಡವರ ಅಶಕ್ತರ ನಿರ್ಗತಿಕರ ಬಾಳಿಗೆ ಬೆಳಕಾಗಲು ಅನೇಕ ಕಾರ್ಯಕ್ರಮಗಳನ್ನು ಸಂಘಟಿಸುವುದಲ್ಲದೇ ಪರಿಸರ ಸಂರಕ್ಷಣೆಯ ಮೂಲ ಉದ್ದೇಶದಿಂದ ಪ್ರಕೃತಿಯನ್ನು ಕಾಪಾಡಲು ಸಹಕರಿಸಬೇಕೆಂಬ ದ್ಯೇಯ ಉದ್ದೇಶದಿಂದ ಇದುವರೆಗೂ ರಾಜ್ಯಾದ್ಯಂತ 73 ಕೋಟಿಯಷ್ಟು ಗಿಡ ನಾಟಿ ಮಾಡಿದೆ. ಪ್ರಸ್ತುತ ವರ್ಷದಲ್ಲಿ ಯೋಜನೆಯು ರಾಜ್ಯಾದ್ಯಂತ 2 ಲಕ್ಷಕ್ಕೂ ಅಧಿಕ ಸಸಿಯನ್ನು ನಾಟಿ ಮಾಡಲು ಪರಿಸರ ಕಾರ್ಯಕ್ರಮ, ಕೆರೆಯಂಗಳದಲ್ಲಿ ಗಿಡನಾಟಿ ಹಾಗೂ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದೆ ಎಂದು ತಿಳಿಸಿದರು.
ಜೊತೆಗೆ ಪ್ರಸ್ತುತ ವರ್ಷ ತುಮಕೂರು–1 ಜಿಲ್ಲೆಯಾದ್ಯಂತ 20 ಸಾವಿರ ಸಸಿಗಳನ್ನು ನಾಟಿ ಮಾಡಿ ಪ್ರಕೃತಿಯನ್ನು ಕಾಪಾಡಲು ಕೊಡುಗೆ ನೀಡುತ್ತಿದೆ ಎಂದು ಸವಿಸ್ತಾರವಾಗಿ ತಿಳಿಸಿದರು.
ತಾಲ್ಲೂಕಿನ ಗಸ್ತು ಅರಣ್ಯಪಾಲಕರಾದ(ಪಾರೆಸ್ಟರ್)ನೀಲಮ್ಮರವರು ಮಾತನಾಡಿ, ಸರ್ಕಾರದ ವತಿಯಿಂದ ನರೇಗಾ ಯೋಜನೆಯಡಿ ರೈತರು ತಮ್ಮ ಜಮೀನಿನ ಸರ್ವೇ ನಂಬರ್ ನೀಡಿ ಉಚಿತವಾಗಿ ಸಸಿ ಬೆಳೆಯಲು ಸಸಿ ವಿತರಣೆ ಮಾಡಲಾಗುತ್ತದೆ ಎಂದರು.
ಬಳಿಕ ಸಾಂಕೇತಿಕವಾಗಿ ಗಣ್ಯರಿಂದ ದೇವಸ್ಥಾನದ ಆವರಣದಲ್ಲಿ 500 ಸಸಿಗಳ ಗಿಡನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ತಾಲ್ಲೂಕಿನ ಎಲ್ಲ ರೈತರಿಗೆ 1,500 ಸಸಿಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು.
ಬಿದಿರಾಂಬಿಕಾ ದೇವಸ್ಥಾನದ ಗುಡಿಗೌಡರಾದ ಶಿವಕುಮಾರ್ ಸ್ವಾಮಿ ರವರು ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಬೆಂಗಳೂರು ಪ್ರಾದೇಶಿಕ ವ್ಯಾಪ್ತಿಯ ಜನಜಾಗೃತಿ ವೇದಿಕೆ ಯೋಜನಾಧಿಕಾರಿಗಳಾದ ತಿಮ್ಮಯ್ಯನಾಯ್ಕ, ತಾಲ್ಲೂಕು ಯೋಜನಾಧಿಕಾರಿ ಉದಯ್ ಕೆ, ಕೃಷಿ ಮೇಲ್ವಿಚಾರಕರಾದ ಪ್ರಮೋದ್, ವಲಯ ಮೇಲ್ವಿಚಾರಕರಾದ ಅನಿತ, ಬಿದರೆಗುಡಿ ವಲಯದ ಎಲ್ಲಾ ಸೇವಾಪ್ರತಿನಿಧಿಗಳು ಪಾಲುದಾರ ಬಂಧುಗಳು, ಊರಿನ ಗಣ್ಯರು, ರೈತಾಪಿ ವರ್ಗದವರು ಉಪಸ್ಥಿತರಿದ್ದರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296