ಬಾಂಗ್ಲಾದೇಶದಲ್ಲಿ ಅರಾಜಕತೆ ಸೃಷ್ಟಿಯಾಗಲು ಅಮೆರಿಕಾ ಷಡ್ಯಂತ್ರ ಕಾರಣ ಎಂದು ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಆರೋಪ ಮಾಡಿದ್ದಾರೆ.
ಬಾಂಗ್ಲಾದೇಶದಲ್ಲಿ ಶುರುವಾದ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದು 500ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಈ ನಡುವೆ ಭಾರತದಲ್ಲಿ ರಾಜಾಶ್ರಯ ಪಡೆದಿರುವ ಹಸೀನಾ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು, ಬಾಂಗ್ಲಾದಲ್ಲಿ ಅರಾಜಕತೆ ಸೃಷ್ಟಿಯಾಗಲು ಹಾಗೂ ಪ್ರಧಾನಿ ಸ್ಥಾನದಿಂದ ತಾವು ಕೆಳಗಿಳಿಯಲು ಅಮೆರಿಕಾ ಷಡ್ಯಂತ್ರವೇ ಕಾರಣ ಎಂದಿದ್ದಾರೆ.
ಎಕನಾಮಿಕ್ ಟೈಮ್ಸ್‌ಗೆ ಪ್ರತಿಕ್ರಿಯಿಸಿರೋ ಶೇಕ್ ಹಸೀನಾ, ನಾನು ಸೇಂಟ್ ಮಾರ್ಟಿನ್ ದ್ವೀಪವನ್ನು ಬಿಟ್ಟುಕೊಟ್ಟಿದ್ದರೆ ಮತ್ತು ಬಂಗಾಳಕೊಲ್ಲಿಯ ಮೇಲೆ ಅಮೆರಿಕದ ಹಿಡಿತಕ್ಕೆ ಅವಕಾಶ ನೀಡಿದ್ದರೆ ನಾನು ಅಧಿಕಾರದಲ್ಲಿ ಉಳಿಯಬಹುದಿತ್ತು ಎಂದಿದ್ದಾರೆ. ಜೊತೆಗೆ . ನಾನು ದೇಶದಲ್ಲಿಯೇ ಉಳಿದಿದ್ದರೇ ಮತ್ತಷ್ಟು ಹಿಂಸಾಚಾರ ನಡೆಯುತ್ತಿತ್ತು. ಆದ್ದರಿಂದ ರಾಜೀನಾಮೆ ನೀಡಿದೆ ಎಂದು ಹಸೀನಾ ಹೇಳಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296