ಪಾವಗಡ: ತಾಲೂಕು ವೈ.ಎನ್.ಹೊಸಕೋಟೆ ಹೋಬಳಿ ಮರಿದಾಸನ ಹಳ್ಳಿ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಚರಂಡಿ ವ್ಯವಸ್ಥೆ ಮತ್ತು ಸಿಸಿ ರಸ್ತೆ ಇಲ್ಲದೆ ಜನರಿಗೆ ತುಂಬಾ ತೊಂದರೆಯಾಗುತ್ತಿದೆ. ಹೆಣ್ಣು ಮಕ್ಕಳು ಪಾತ್ರೆ ತೊಳೆಯುವ ನೀರು, ಬಟ್ಟೆ ಒಗೆಯುವ ನೀರು ಮತ್ತು ಬಚ್ಚಲು ನೀರು ಮುಖ್ಯರಸ್ತೆಯಲ್ಲಿ ನಿಂತು ದುರ್ವಾಸನೆ ಬೀರುತ್ತಿದ್ದು, ಗ್ರಾಮದ ವೃದ್ಧರು ಮಕ್ಕಳು ಜನಸಾಮಾನ್ಯರು ಓಡಾಡಲು ತುಂಬಾ ತೊಂದರೆಯಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಹೈಕೋರ್ಟ್ ವಕೀಲರು ಹಾಗೂ ಭಾರತೀಯ ಪರಿವರ್ತನ ಸಂಘ(ಬಿಪಿಎಸ್) ದ ರಾಜ್ಯಾಧ್ಯಕ್ಷರು ಆದ ಹರಿರಾಮ್ ಎ. ಹಾಗೂ ಕನ್ನಡ ಮತ್ತು ತೆಲುಗು ಚಲನಚಿತ್ರ ನಾಯಕ ನಟ ಹಾಗೂ ಸಾಮಾಜಿಕ ಹೋರಾಟಗಾರರಾದ ಚೇತನ್ ಅಹಿಂಸರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಪ್ರದೇಶದಲ್ಲಿ ಸೊಳ್ಳೆಗಳ ಕಾಟ ಜಾಸ್ತಿಯಾಗಿದ್ದು ಡೆಂಗ್ಯೂ ಮಲೇರಿಯಾ ಕಾಯಿಲೆಗಳು ಇತ್ತೀಚಿಗೆ ಹೆಚ್ಚಾಗಿದ್ದು, ಅದನ್ನು ತಡೆಗಟ್ಟಲು ಮರಿದಾಸನಹಳ್ಳಿ ಗ್ರಾಮದ ಜನರು ನೆಮ್ಮದಿ ಜೀವನ ಹಾಗೂ ಸುಸಜ್ಜಿತ ಆರೋಗ್ಯ ಕಾಪಾಡಿಕೊಳ್ಳಲು ಆದಷ್ಟು ಬೇಗ ಜನತಾ ಕಾಲೋನಿಯ ಮೂರು ವಠಾರಗಳಲ್ಲಿ ಚರಂಡಿ ವ್ಯವಸ್ಥೆ ಹಾಗೂ ಸಾರ್ವಜನಿಕ ಬಸ್ ನಿಲ್ದಾಣದಿಂದ ಅಕ್ಕಮ್ಮನ ಬೆಟ್ಟಕ್ಕೆ ಹೋಗುವ ದಾರಿಗೆ ಸಿಸಿ ರಸ್ತೆ ಮತ್ತು ಚರಂಡಿ ವ್ಯವಸ್ಥೆ ಮಾಡಿ ಕೊಡಬೇಕೆಂದು ಒತ್ತಾಯಿಸಿ, ಭಾರತೀಯ ಪರಿವರ್ತನ ಸಂಘದ ತುಮಕೂರು ಜಿಲ್ಲಾಧ್ಯಕ್ಷ ಚಿಕ್ಕತಿಮ್ಮನಹಟ್ಟಿ ಗ್ರಾಮದ ಹೆಚ್.ಕೆಂಚರಾಯ ಮತ್ತು ಮುಖಂಡರಾದ ಹರಿಹರಪುರದ ಹನುಮಂತರಾಯಪ್ಪ, ಮರಿದಾಸನಹಳ್ಳಿ ಗ್ರಾಮದ ಕೆಂಚಪ್ಪ ರವರು ತಹಶೀಲ್ದಾರ್ ಅವರಿಗೆ ಮನವಿ ಪತ್ರ ನೀಡಿದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296