ಪಾವಗಡ: 2024 — 25 ನೇ ಸಾಲಿನ ತಾಲ್ಲೂಕಿನ ಕೋಟಗುಡ್ಡ ಸಹನಾ ಶಾಲೆಯ ವಿದ್ಯಾರ್ಥಿಗಳು ನಿಡಗಲ್ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾಗಿದ್ದು ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿರುವುದಕ್ಕೆ ಸಹನಾ ಶಾಲೆಯ ಆಡಳಿತಾಧಿಕಾರಿಗಳಾದ ಶ್ರೀನಿವಾಸ್ ರವರು ದೈಹಿಕ ಶಿಕ್ಷಕರಾದ ಮಲ್ಲಿಕಾರ್ಜುನ್ ಹಾಗೂ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ವಿಜೇತ ಮಕ್ಕಳ ವಿವರ: ಪ್ರಾಥಮಿಕ ಶಾಲಾ ವಿಭಾಗದಲ್ಲಿ 100 ಮೀಟರ್ ಓಟ ಪ್ರಥಮ ಸ್ಥಾನ, 100 ಮೀಟರ್ ಓಟ ದ್ವಿತೀಯ ಸ್ಥಾನ , 200 ಮೀಟರ್ ಓಟ ಪ್ರಥಮ ಸ್ಥಾನ, 200 ಮೀಟರ್ ಓಟ ತೃತೀಯ ಸ್ಥಾನ, ಬಾಲಕರ ರಿಲೇ ಪ್ರಥಮ ಸ್ಥಾನ, ಗುಂಡು ಎಸೆತ ದ್ವಿತೀಯ ಸ್ಥಾನ, ಬಾಲಕರ ಉದ್ದ– ಜಿಗಿತ ದ್ವಿತೀಯ ಸ್ಥಾನ, ಬಾಲಕರ ಥ್ರೋಬಾಲ್ ಪ್ರಥಮ ಸ್ಥಾನ, ಬಾಲಕರ ಟೇಬಲ್ ಟೆನಿಸ್ ಪ್ರಥಮ ಸ್ಥಾನ, ಬಾಲಕರ ಬ್ಯಾಡ್ಮಿಂಟನ್ ಪ್ರಥಮ ಸ್ಥಾನ, ಬಾಲಕಿಯರ ಟೇಬಲ್ ಟೆನ್ನಿಸ್ ಪ್ರಥಮ ಸ್ಥಾನ , ಬಾಲಕಿಯರ ರಿಲೇ ದ್ವಿತೀಯ ಸ್ಥಾನ, ಬಾಲಕಿಯರ ಗುಂಡು ಎಸೆತ ತೃತೀಯ ಸ್ಥಾನ ಪ್ರೌಢಶಾಲಾ ವಿಭಾಗದಲ್ಲಿ ಬಾಲಕರ ಟೇಬಲ್ ಟೆನ್ನಿಸ್ ಪ್ರಥಮಸ್ಥಾನ, ಬಾಲಕಿಯರ ಟೇಬಲ್ ಟೆನ್ನಿಸ್ ಪ್ರಥಮ ಸ್ಥಾನ, ಬಾಲಕಿಯರ 100 ಮೀಟರ್ ಓಟ– ದ್ವಿತೀಯಸ್ಥಾನ, ಬಾಲಕಿಯರ ಉದ್ದ ಜಿಗಿತ ಪ್ರಥಮ ಸ್ಥಾನ, ಬಾಲಕರ 400 ಮೀಟರ್ ಓಟ ದ್ವಿತೀಯ ಸ್ಥಾನ, ಬಾಲಕರ ಥ್ರೋಬಾಲ್ ದ್ವಿತೀಯ ಸ್ಥಾನ ಈ ಸಂದರ್ಭದಲ್ಲಿ ಮುಖ್ಯಶಿಕ್ಷಕರಾದ ನರಸಿಂಹಪ್ಪ S., ದೈಹಿಕ ಶಿಕ್ಷಕರಾದ ಮಲ್ಲಿಕಾರ್ಜುನ್ S, ಶಿಕ್ಷಕರಾದ ರಮೇಶ್, ಶ್ರೀದೇವಿ B.C. , ಶಿಲ್ಪ P O ಮತ್ತು ಲಕ್ಷ್ಮೀ ಇದ್ದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296