ಕಲಬುರಗಿ: ಆಟೋ ಚಾಲಕರ ಸಂಘದ ಮುಖಂಡರು ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ವೇಳೆ ಮಹಾತ್ಮ ಗಾಂಧಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಗಳ ಜತೆಗೆ ಟಿಪ್ಪು ಸುಲ್ತಾನ್ ಫೋಟೊ ಇರಿಸಿ ಪೂಜಿಸಿದ ಘಟನೆ ನಗರದ ಹುಮನಾಬಾದ್ ರಿಂಗ್ ರೋಡ್ ಸಮೀಪ ನಡೆದಿದೆ.
ಧ್ವಜಸ್ತಂಭದ ಬದಿಯಲ್ಲಿ ಗಾಂಧೀಜಿ ಮತ್ತು ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಇರಿಸಿ ಪೂಜಿಸುವ ಶಿಷ್ಟಾಚಾರವಿದೆ. ಆದರೆ, ಆಟೋ ಸಂಘದವರು ಟಿಪ್ಪು ಫೋಟೊ ಕೂಡ ಇರಿಸಿ ಪೂಜೆ ಸಲ್ಲಿಸಿದ್ದರು.
ವಿಷಯ ತಿಳಿದು ಸಬ್ ಅರ್ಬನ್ ಠಾಣೆಯ ಪೊಲೀಸರು ಸ್ಥಳಕ್ಕೆ ಬಂದು ಟಿಪ್ಪು ಫೋಟೋ ತೆಗೆಯುವಂತೆ ಸೂಚಿಸಿದರು. ತೆಗೆಯುವುದಾದರೆ ಮೂವರ ಫೋಟೊಗಳನ್ನೂ ತೆಗೆಯುತ್ತೇವೆ. ಟಿಪ್ಪು ಫೋಟೊ ಮಾತ್ರ ತೆಗೆಯುವುದಿಲ್ಲ ಎಂದು ಸಂಘದವರು ಪಟ್ಟು ಹಿಡಿದಿದ್ದಾರೆ. ಇದರಿಂದಾಗಿ ಪೊಲೀಸರು ಗೊಂದಲದಲ್ಲಿ ಸಿಲುಕಿದರು.
ಧ್ವಜಸ್ತಂಭದ ಬಳಿ ಟಿಪ್ಪು ಫೋಟೊ ಇರಿಸಿದ್ದನ್ನು ತೆರವುಗೊಳಿಸಿದ್ದೇವೆ. ಯಾರಾದರೂ ಮುಂದೆ ಬಂದು ದೂರು ದಾಖಲಿಸಿದರೆ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q


