ಪಾವಗಡ: ಭಾರತೀಯ ವಿದ್ಯಾರ್ಥಿ ಸಂಘ–BVS ತುಮಕೂರು ಜಿಲ್ಲೆ ವತಿಯಿಂದ ಪಾವಗಡ ತಾಲ್ಲೂಕು, ನಿಡಗಲ್ಲು ಹೋಬಳಿ, ಚಿಕ್ಕತಿಮ್ಮನಹಟ್ಟಿ ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಕನ್ನಡ ಕಾಪಿ ಪುಸ್ತಕ ಮತ್ತು English Cursive Copy Writing ಜೊತೆಗೆ ಕಲಿಕಾ ಸಾಮಗ್ರಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ನರಸಿಂಹಮೂರ್ತಿ ಹಾಗೂ ಸಹ ಶಿಕ್ಷಕರಾದ ದೇವರಾಜ್, ನಾಗಮಣಿ, ಹಾಗೂ ತುಮಕೂರು BVS ಜಿಲ್ಲಾ ಸಂಯೋಜಕರಾದ ಚಿಕ್ಕತಿಮ್ಮನಹಟ್ಟಿ ಗ್ರಾಮದ ಎಚ್.ಕೆಂಚರಾಯ, ಮಾಜಿ SDMC ಅಧ್ಯಕ್ಷರಾದ ಪೂಲಪ್ಪ ಹಾಗೂ ಬಿವಿಎಸ್ ಸಂಘಟನೆಗೆ ಬೆಂಬಲಿಸುತ್ತಿರುವ ರಾಜಕುಮಾರ್, ಹಾಗೂ ನಾಗೇಶ್, JCB ಓಬಳೇಶ್ ಉಪಸ್ಥಿತರಿದ್ದರು.
ವಿಶೇಷವಾಗಿ ಮಕ್ಕಳಿಗೆ ವಿತರಿಸಲು ಬೇಕಾದ ಕಲಿಕಾ ಸಾಮಗ್ರಿಗಳನ್ನು ನಂಜನಗೂಡು ತಾಲೂಕಿನ ಮುಳ್ಳೂರು ಗ್ರಾಮದ BVSನ ರಾಘವೇಂದ್ರ ಅವರು ಕೊಡುಗೆಯಾಗಿ ನೀಡಿದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q