ತುಮಕೂರು: ಸಿದ್ದರಾಮಯ್ಯ ನುರಿತ ರಾಜಕಾರಣಿ. ಇಂತಹ ಸಂದರ್ಭದಲ್ಲಿ ಅವರ ಪಕ್ಷ ಹೇಳಬೇಕಾಗುತ್ತೆ. ರಾಜೀನಾಮೆ ಬಗ್ಗೆ ನಾವು ತೀರ್ಮಾನ ಮಾಡಲು ಆಗಲ್ಲ. ಪಕ್ಷ ತೀರ್ಮಾನ ಮಾಡಬೇಕು. ಆಗ ಸಿದ್ದರಾಮಯ್ಯರ ವರ್ಚಸ್ಸು ಹೆಚ್ಚಾಗುತ್ತೆ ಎಂದು ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ತುಮಕೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರು ಸೂಚನೆ ನೀಡಿರೋದು ಕಾನೂನಿ ಅಡಿಯಲ್ಲಿ ಇರೋದ್ರಿಂದ ಕಾನೂನು ಚೌಕಟ್ಟಿನಲ್ಲಿ ನಡೆದುಕೊಳ್ಳಬೇಕಿರೋದು ಅನುಭವಿ ರಾಜಕಾರಣಿ ಸಿದ್ದರಾಮಯ್ಯ ಅವರ ಕರ್ತವ್ಯ ಎಂದರು.
ಅದನ್ನ ಮಾಡಲಿ ಎನ್ನೋದು ನನ್ನ ಆಗ್ರಹ. ಸಿದ್ದರಾಮಯ್ಯನವರು ಎಂದೂ ಕೂಡ ದುಡುಕೋದು ಮಾಡ್ತಾರಾ ಮತ್ತೊಂದು ಮಾಡ್ತಾರ ಗೊತ್ತಿಲ್ಲ ಎಂದರು.
ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ 125 ವರ್ಷ ಇತಿಹಾಸ ಇರುವ ಪಕ್ಷ. ನಾವು ಬಿಜೆಪಿಯವರು ಹೇಗೆ ನಡೆದುಕೊಂಡಿದ್ದೀವಿ ಅಂತಾ ಅರ್ಥಮಾಡಿಕೊಂಡು ಅವರು ತೀರ್ಮಾನ ತೆಗೆದುಕೊಂಡರೆ ಮುಂದಿನ ಪೀಳಿಗೆಗೆ ರಾಜಕೀಯ ಬಗ್ಗೆ ಗೌರವ ಇರುತ್ತೆ ಎಂದರು.
ಅದನ್ನ ಮಾಡಬೇಕಾಗಿರೊದು ಆ ಪಕ್ಷ ಹಾಗೂ ಸಿದ್ದರಾಮಯ್ಯ. ತುಮಕೂರು ಕ್ಷೇತ್ರ ಸಂಬಂದಿಸಿದಂತೆ ರಾಜಕಾರಣ ಮಾಡಲು ಹೋಗಲ್ಲ ಎಂದರು.
ಸಿದ್ದರಾಮಯ್ಯ ರಾಜೀನಾಮೆ ಕೊಡೋ ಉದ್ದೇಶ ನಾವು ಮಾಡಿದ್ದು ಅಲ್ಲ, ರಾಜ್ಯಪಾಲರಿಗೆ ತಪ್ಪು ಎನಿಸಿದರಿಂದ ಅವರು ನಿರ್ಧಾರ ಮಾಡಿದ್ದಾರೆ ಅವರ ತೀರ್ಮಾನಕ್ಕೆ ಬದ್ದವಾಗಿರಬೇಕು ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q