ಭಾರತದ ಅತಿದೊಡ್ಡ ವಿಮಾ ಸಂಸ್ಥೆಯಾದ ಲೈಫ್ ಇನ್ಷೂರೆನ್ಸ್ ಕಾರ್ಪೊರೇಶನ್ ಅತಿದೊಡ್ಡ ಏಜೆಂಟ್ಗಳ ಬಳಗ ಹೊಂದಿದೆ. ಎಲ್ ಐಸಿ ಇನ್ಷೂರೆನ್ಸ್ ಏಜೆಂಟ್ ಗಳ ಸಂಖ್ಯೆ ದೇಶಾದ್ಯಂತ ಸುಮಾರು 14 ಲಕ್ಷ ಇದೆ. ಉದ್ಯೋಗಿಗಳನ್ನು ಸೇರಿಸಿದರೆ ಸಂಖ್ಯೆ ಇನ್ನೂ ಹೆಚ್ಚಾಗುತ್ತದೆ. ಅತಿಹೆಚ್ಚು ಮಂದಿಗೆ ಕೆಲಸ ಕೊಟ್ಟಿರುವ ಸಂಸ್ಥೆಗಳಲ್ಲಿ ಎಲ್ಐಸಿ ಒಂದು.
ಇಲ್ಲಿ ಎಲ್ ಐಸಿ ಏಜೆಂಟ್ ಗಳಿಗೆ ನಿಶ್ಚಿತ ಸಂಬಳ ಎಂಬುದು ಇರುವುದಿಲ್ಲ. ಪ್ರತೀ ಏಜೆಂಟ್ ಗಳೂ ಕೂಡ ಕಮಿಷನ್ ಆಧಾರದ ಮೇಲೆ ಆದಾಯಗಳಿಸುತ್ತಾರೆ. ಕರ್ನಾಟಕದಲ್ಲಿ ಒಟ್ಟು 81,674 ಎಲ್ ಐಸಿ ಏಜೆಂಟ್ ಗಳು ಇದ್ದು, ಇವರು ಗಳಿಸುವ ಆದಾಯ ತಿಂಗಳಿಗೆ ಸರಾಸರಿಯಾಗಿ 13,265 ರೂ. ಎನ್ನಲಾಗಿದೆ.
ಎಲ್ ಐಸಿ ಏಜೆಂಟ್ ಆಗುವುದು ಹೇಗೆ?
ಎಲ್ ಐಸಿಯಲ್ಲಿ ಏಜೆಂಟ್ ಆಗಿ ಕೆಲಸ ಮಾಡುವವರು ಕನಿಷ್ಠ ದ್ವಿತೀಯ ಪಿಯುಸಿ ಓದಿರಬೇಕು. ಐಆರ್ ಡಿಎಐ ಪ್ರತೀ ವರ್ಷ ನಡೆಸುವ ಪರೀಕ್ಷೆಯಲ್ಲಿ ತೇರ್ಗಡೆ ಆಗಿರಬೇಕು. ನಿಮ್ಮ ಸ್ಥಳದ ಸಮೀಪ ಇರುವ ಎಲ್ಐಸಿ ಕಚೇರಿಯಲ್ಲಿ ಏಜೆಂಟ್ ಆಗಿ ಸೇರಲು ಅಲ್ಲಿನ ಬ್ರ್ಯಾಂಚ್ ಮ್ಯಾನೇಜರ್ ಅವರನ್ನು ಸಂಪರ್ಕಿಸಿ ವಿಚಾರಿಸಬಬಹುದು. ಇಂಟರ್ವ್ಯೂನಲ್ಲಿ ನೀವು ಏಜೆಂಟ್ ಆಗಿ ಆಯ್ಕೆಯಾದ ಬಳಿಕ ನಾಲ್ಕು ದಿನಗಳ ತರಬೇತಿ ಇರುತ್ತದೆ.
ಎಲ್ ಐಸಿ ಏಜೆಂಟ್ಗೆ ನಿರ್ದಿಷ್ಟ ಸಂಬಳ ಇರುವುದಿಲ್ಲ. ವರ್ಷಕ್ಕೆ ಇಷ್ಟು ಬಿಸಿನೆಸ್ ತರಬೇಕಾಗುತ್ತದೆ. ನೀವು ಮಾಡಿಸುವ ಎಲ್ ಐಸಿ ಪಾಲಿಸಿಗಳ ಪ್ರೀಮಿಯಮ್ ಗಳಿಂದ ನಿಮಗೆ ಕಮಿಷನ್ ಸಿಗುತ್ತದೆ. ಎರಡನೇ ಮತ್ತು ಮೂರನೇ ವರ್ಷದ ಪ್ರೀಮಿಯಮ್ ಗಳಿಂದ ಶೇ. 7.5ರಷ್ಟು ಕಮಿಷನ್ ಸಿಗುತ್ತದೆ. ನಾಲ್ಕನೇ ವರ್ಷದಿಂದ ಪ್ರತೀ ಪ್ರೀಮಿಯಮ್ ಮೇಲೆ ಶೇ. 5ರಷ್ಟು ಕಮಿಷನ್ ಸಿಗುತ್ತದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q