ಚೆನ್ನೈ: ಭಾರತೀಯ ಕೋಸ್ಟ್ ಗಾರ್ಡ್ ಮಹಾನಿರ್ದೇಶಕ ರಾಕೇಶ್ ಪಾಲ್ ಭಾನುವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ರಾಕೇಶ್ ಪಾಲ್ ಶನಿವಾರ ಚೆನ್ನೈಗೆ ಬಂದಿದ್ದ ವೇಳೆ ತೀವ್ರ ಎದೆನೋವು ಕಾಣಿಸಿಕೊಂಡು ಅಸ್ವಸ್ಥರಾಗಿದ್ದರು.
ತಕ್ಷಣವೇ ಅವರನ್ನು ರಾಜೀವ್ ಗಾಂಧಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನರಾಗಿದ್ದಾರೆ.
1989ರಲ್ಲಿ ಭಾರತೀಯ ಕೋಸ್ಟ್ ಗಾರ್ಡ್ ಸೇರಿದ್ದ ಪಾಲ್, ಜುಲೈ 2023ರಲ್ಲಿ ಭಾರತೀಯ ಕೋಸ್ಟ್ ಗಾರ್ಡ್‌ನ ಮಹಾ ನಿರ್ದೇಶಕರಾಗಿ ನೇಮಕಗೊಂಡರು. ಕಳೆದ ತಿಂಗಳಷ್ಟೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ತಮ್ಮ ವಿಶೇಷ ಸೇವೆ ವಿಶಿಷ್ಟ ಸೇವಾ ಮೆಡಲ್ ಪಡೆದುಕೊಂಡಿದ್ದರು.
ಕೋಸ್ಟ್ ಗಾರ್ಡ್‌ನ ಮೊದಲ ಗನ್ನರ್ ಎಂಬ ಮನ್ನಣೆ ಹೊಂದಿದ್ದ ಅವರು, 2013 ರಲ್ಲಿ ತತ್ರಾಕ್ಷಕ್ ಪದಕ (ಟಿಎಂ) ಮತ್ತು 2018 ರಲ್ಲಿ ಅವರ ವಿಶಿಷ್ಟ ಸೇವೆಗಾಗಿ ಅಧ್ಯಕ್ಷ ತತ್ರಾಕ್ಷಕ್ ಪದಕ (ಪಿಟಿಎಂ) ಸಹ ಪಡೆದುಕೊಂಡಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q