ಹೆಂಡತಿ ತವರಿಗೆ ಹೋಗಬೇಕು ಎಂದಿದ್ದಕ್ಕೆ ಗಂಡ ಆಕೆಯ ಮೂಗು ಕತ್ತರಿಸಿದ್ದಾನೆ. ಉತ್ತರ ಪ್ರದೇಶದ ಹಾರ್ಡೋಯಿ ಜಿಲ್ಲೆಯ ಬನಿಯಾನಿ ಪುರ್ವಾದಲ್ಲಿ ಈ ಘಟನೆ ನಡೆದಿದೆ. ಭಾನುವಾರ ಮಹಿಳೆ ನಾಳೆ ರಾಖಿ ಹಬ್ಬ ಇದೆ ಸಹೋದರರಿಗೆ ರಾಖಿ ಕಟ್ಟಬೇಕು ತವರಿಗೆ ಹೋಗುತ್ತೇನೆ ಎಂದು ಗಂಡನಿಗೆ ಹೇಳಿದ್ದಾಳೆ. ಇಷ್ಟಕ್ಕೇ ಆಕ್ರೋಶಗೊಂಡ ಗಂಡ ಆಕೆಯ ಮೂಗು ಕತ್ತರಿಸಿದ್ದಾನೆ.
25 ವರ್ಷದ ಅನಿತಾ ಎಂಬಾಕೆಯೇ ಗಂಡನ ದಾಳಿಗೆ ತುತ್ತಾದ ಮಹಿಳೆ.ಅನಿತಾಗೆ ತೀವ್ರ ರಕ್ತಸ್ರಾವ ಆಗುತ್ತಿರುವುದನ್ನು ಕಂಡ ಅಕ್ಕಪಕ್ಕದ ಜನ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.ನಂತರ ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಲಕ್ನೋದ ಟ್ರಾಮಾ ಸೆಂಟರ್ಗೆ ಸ್ಥಳಾಂತರ ಮಾಡಲಾಗಿದೆ. ರಾಹುಲ್ ಎಂಬಾತನೇ ತನ್ನ ಹೆಂಡತಿಯ ಮೂಗು ಕತ್ತರಿಸಿದಾತ. ಗಂಡನ ಕ್ರೌರ್ಯದ ಬಗ್ಗೆ ಅನಿತಾ ವಿವರವಾಗಿ ಹೇಳಿ ಗೋಳು ತೋಡಿಕೊಂಡಿದ್ದಾಳೆ. ಆರೋಪಿ ನಾಪತ್ತೆಯಾಗಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಈ ಕುರಿತು ವಿಡಿಯೋ ಮಾಡಿರುವ ಆ ಮಹಿಳೆ ತನ್ನ ಮೇಲೆ ಗಂಡ ಮಾಡಿದ ದೌರ್ಜನ್ಯದ ಬಗ್ಗೆ ಹೇಳಿಕೊಂಡಿದ್ದಾಳೆ. ತನ್ನ ಪತಿ ತನ್ನ ಮೂಗು ಕತ್ತರಿಸಿದ್ದಾನೆ ಎಂದು ಆರೋಪಿಸಿದ್ದಾಳೆ. ತನಗೆ ಇನ್ನು ಬದುಕಲು ಇಷ್ಟವಿಲ್ಲ ಎಂದು ಹೇಳುವುದನ್ನು ವಿಡಿಯೋದಲ್ಲಿ ಕೇಳಬಹುದು. ತನ್ನ ಪತಿಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಬಯಸುವುದಾಗಿಯೂ ಆಕೆ ಹೇಳಿದ್ದಾಳೆ.
ಗಾಯಗೊಂಡ ಮಹಿಳೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ, ಹರ್ದೋಯ್ ಪೊಲೀಸರು ಎಕ್ಸ್ನಲ್ಲಿ ಪೋಸ್ಟ್ ನಲ್ಲಿ ಈ ವಿಷಯವು ತನಿಖೆಯಲ್ಲಿದೆ ಮತ್ತು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q