ತುಮಕೂರು: ಇಂದು ಬೆಳಗ್ಗೆ ಸುಮಾರು 2 ಗಂಟೆಗೂ ಹೆಚ್ಚು ಕಾಲ ಸುರಿದ ಭಾರಿ ಮಳೆಗೆ ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತ್ತು.
ಜಿಲ್ಲೆಯ ಗುಬ್ಬಿ ಪಟ್ಟಣದಿಂದ ಹೊರವಲಯದಲ್ಲಿರುವ ಬಿದರೆ –ಗುಬ್ಬಿ ಸಂಪರ್ಕ ರಸ್ತೆಯಲ್ಲಿ ಇರುವ ರೈಲ್ವೆ ಅಂಡರ್ ಪಾಸ್ ನಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ಸಂಚರಿಸುವ ವೇಳೆ ಸಿಲುಕಿಕೊಂಡಿತ್ತು.
ಬಸ್ಸಿನ ಒಳಗೆ ಇದ್ದಂತ ಪ್ರಯಾಣಿಕರನ್ನು ಸುರಕ್ಷಿತ ಜಾಗಕ್ಕೆ ತಲುಪಿಸಲು ಅಗ್ನಿಶಾಮಕ ದಳ ಪ್ರಯತ್ನಪಟ್ಟರು. ಇದರಿಂದಾಗಿ ಕೆಲಕಾಲ ಪ್ರಯಾಣಿಕರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಸುಮಾರು ಆರು ಅಡಿಯಷ್ಟು ನೀರು ನಿಂತಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q