ಬಿಹಾರ: ಒಂದು ವರ್ಷದ ಮಗುವೊಂದು ಹಾವನ್ನು ಕಚ್ಚಿ ಕೊಂದು ಹಾಕಿದ ಅಚ್ಚರಿಯ ಘಟನೆ ಬಿಹಾರದ ಗಯಾ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.
ಮನೆಯ ಟೆರೆಸ್ ನಲ್ಲಿ ಮಗು ಆಟವಾಡುತ್ತಿದ್ದ ವೇಳೆ ಹಾವೊಂದು ಕಾಣಿಸಿಕೊಂಡಿತ್ತು. ಇದು ಆಟದ ವಸ್ತು ಎಂದು ಭಾವಿಸಿ ಮಗು ಹಾವಿಗೆ ಕಚ್ಚಿದೆ. ಮಗು ಹಾವನ್ನು ಕಚ್ಚುತ್ತಿರುವುದನ್ನು ಕಂಡು ಹೆದರಿದ ಮಗುವಿನ ತಾಯಿ ಓಡಿ ಬಂದು ಬಾಯಲ್ಲಿದ್ದ ಹಾವನ್ನು ಕಿತ್ತು ಎಸೆದಿದ್ದಾರೆ.
ಬಳಿಕ ಮಗುವನ್ನು ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆ ನಡೆಸಿದ್ದಾರೆ. ಈ ವೇಳೆ ಮಗುವಿಗೆ ಯಾವುದೇ ಅಪಾಯವಿಲ್ಲ ಎನ್ನುವುದು ತಿಳಿದು ಬಂದಿದೆ.
ಮಗು ಕಚ್ಚಿದ ಹಾವು ವಿಷಕಾರಿಯಾಗಿರಲಿಲ್ಲ, ಮಳೆಗಾಲದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಹಾವಾಗಿದೆ ಎಂದು ವೈದ್ಯರು ವಿವರಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q