ವಾಷಿಂಗ್ಟನ್ : ಭಾರತೀಯರು ಇತರರನ್ನು ವಂಚಿಸಲು ಸಾಧ್ಯವಿಲ್ಲ, ನಮ್ಮ ನಮ್ಮ ಸ್ವಭಾವದಲ್ಲಿ ಮೋಸ ಎಂಬುದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಅಮೆರಿಕದಲ್ಲಿರುವ ಭಾರತೀಯ ವಲಸಿಗರನ್ನುದ್ದೇಶಿಸಿ ಮಾತನಾಡಿದ ಅವರು, ಅನಿವಾಸಿಗಳಾಗಿ ಅಮೆರಿಕಕ್ಕೆ ಅವರ ಸಮರ್ಪಣೆಯನ್ನು ಪ್ರಶ್ನಿಸಬಾರದು ಎಂದು ಹೇಳಿದರು. ಇಲ್ಲಿ ಕೆಲಸ ಮಾಡುವ ಭಾರತೀಯ ಸದಸ್ಯರಿಗೆ ನಾನು ಪೂರ್ಣ ಪ್ರಾಮಾಣಿಕತೆಯಿಂದ ಕೆಲಸ ಮಾಡಲು ಹೇಳಲು ಬಯಸುತ್ತೇನೆ ಎಂದರು.
ನಿಮಗೆ ಭಾರತ ಬಗ್ಗೆ ಸಮರ್ಪಣೆ ಇರಬೇಕು. ಆದರೆ ನೀವು ಇಲ್ಲಿ ಕೆಲಸ ಮಾಡುತ್ತಿರುವುದರಿಂದ, ಅಮೆರಿಕದತ್ತ ನಿಮಗಿರುವ ಸಮರ್ಪಣೆಯನ್ನೂ ಪ್ರಶ್ನಿಸಬಾರದು. ಆಗ ಮಾತ್ರ ಭಾರತೀಯರ ಗ್ರಹಿಕೆಗಳು ಚೆನ್ನಾಗಿರುತ್ತದೆ ಎಂದು ಅವರು ಹೇಳಿದರು.
ಭಾರತೀಯರನ್ನು ಮೋಸ ಮಾಡ ಬಹುದು.ಆದರೆ ಭಾರತೀಯರು ಯಾರನ್ನೂ ಮೋಸ ಮಾಡಲಾರರು. ವಂಚನೆ ನಮ ಸ್ವಭಾವ ದಲ್ಲಿಲ್ಲ, ನಾವು ಮೋಸ ಹೋಗಬಹುದು, ಆದರೆ ನಾವು ಎಂದಿಗೂ ಇತರರಿಗೆ ಮೋಸ ಮಾಡಬಾರದು ಎಂದು ಇದೇ ವೇಳೆ ಅವರು ಹೇಳಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q