Music ಸಂಗೀತಮಯ Mu ತೆಗೆದರೆ sick ಕಾಯಿಲೆ ಆದ್ದರಿಂದ ನಮ್ಮೆಲ್ಲ ನೋವು ,ರುಜಿನ,ಕಾಯಿಲೆ ,ಕಸಾಲೆ ದೂರವಾಗಬೇಕಾದರೆ ಸಂಗೀತ ಹಾಡು ಕೇಳಬೇಕು. ಸಂಗೀತವೆಂದರೆ ಹಾಡುವವರು ಮತ್ತು ಕೇಳುವವರು ಸಮಾನವಾಗಿ ಸುಖಿಸುವ ಸ್ವರ ಪ್ರಪಂಚವು ವಿಟ್ಲ ಪಡಿಬಾಗಿಲು ಮುವಾಜೆ ಸಭಾಂಗಣದಲ್ಲಿ ವರಮಹಾಲಕ್ಷ್ಮಿ ಪೂಜೆಯ ಸಂಭ್ರಮದಲ್ಲಿ ಸ್ವರಮಾದುರ್ಯ ಗಾಯನ ಕಾರ್ಯಕ್ರಮ ನಡೆಯಿತು.
ಮೊದಲಿಗೆ ಶ್ರೀ ಗಣನಾಥ ಸಿಂಧೂರ ವರ್ಣ ಹಾಡಿನೊಂದಿಗೆ ಶ್ರೀ ವರಲಕ್ಷ್ಮಿ ಶ್ರೀ ರಾಗ ಹಾಡಿನೊಂದಿಗೆ ಸುಶ್ರಾವ್ಯವಾಗಿ ಹಾಡಿ ರಂಜಿಸಿದರು. ಕಾಮಾಕ್ಷಿ ವರಲಕ್ಷ್ಮಿರಾಗ ವಸಂತ ,ಪಾಹಿಸುವೆ ಶಿವರಂಜಿನಿ ರಾಗ , ಎಂದರೋ ಮಹಾನುಭಾವುಲು ಶ್ರೀರಾಗ, ಪಂಚರತ್ನ ತ್ಯಾಗರಾಜರ ಕೃತಿ, ಸಾದರ ಮವ ನಿರುಪಮ ಸರಸ್ವತಿ ರಾಗ, ತಿಲ್ಲಾನ ಬೃಂದಾವನಿ ಸಾರಂಗ ಹಾಡಿನೊಂದಿಗೆ ಸಮಾಪ್ತಿಯಾಯಿತು.
ಮುಖ್ಯ ಶಿಕ್ಷಕಿ ಸವಿತಾ ಕೋಡಂದೂರ್ ನಿರ್ದೇಶನದಲ್ಲಿ ಸಿಂಚನಲಕ್ಷ್ಮಿ ಕೋಡಂದೂರ್ ಭಾಗ್ಯಶ್ರೀ ಪಡಿಬಾಗಿಲು, ವಾಣಿ, ಪ್ರತಿಭಾ, ಆದರ್ಶಿನಿ, ಸಾತ್ವಿಕ ಮುಂತಾದವರು ಭಕ್ತಿಗೀತೆ, ಭಾವಗೀತೆ ಜಾನಪದಗೀತೆ, ದಾಸರ ಗೀತೆಗಳನ್ನು ಸ್ವರ ಸಿಂಚನ ಸಂಗೀತ ಶಾಲಾ ವಿದ್ಯಾರ್ಥಿಗಳು ಜೊತೆಯಲ್ಲಿ ಹಾಡಿ ಎಲ್ಲರ ಮನ ಸೆಳೆದು ರಂಜಿಸಿದರು. ಗೋಪಾಲಕೃಷ್ಣ ನಾಯಕ್, ಎಂ.ಆರ್. ಪಿಚ್ಚರ್ಸ್ ಬಾಯರು ಸಹಕರಿಸಿದರು.
ಬರಹ: ಕುಮಾರ್ ಪೆರ್ನಾಜೆ, ಪುತ್ತೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q