ತುಮಕೂರು: ಪ್ರಧಾನಿ ಹೊರ ರಾಷ್ಟ್ರಗಳಿಗೆ ಹೋದ ಸಂದರ್ಭದಲ್ಲಿ ಕ್ಲೀಷ್ಟವಾದ ಸಮಸ್ಯೆಗಳಿಗೆ ಪರಿಹಾರ ತೋರಿಸಿದ್ದಾರೆ. ಉಕ್ರೇನ್– ರಷ್ಯಾ ರಾಷ್ಟ್ರಗಳಲ್ಲೂ ಭಾರತದ ಹೃದಯ ಶ್ರೀಮಂತಿಕೆಯನ್ನ ಅರ್ಥಮಾಡಿಸಿದ್ದಾರೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ ಸೋಮಣ್ಣ ತಿಳಿಸಿದ್ದಾರೆ.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಒಂದು ಕಡೆ ರಷ್ಯಾಕ್ಕೆ ತೆರಳಿ ಪುಟೀನ್ ಭೇಟಿ ಮಾಡಿ, ಯುದ್ಧವೇ ಎಲ್ಲಾದಕ್ಕೂ ಪರಿಹಾರವಲ್ಲ. ಯುದ್ಧ ನಿಲ್ಲಿಸಿ ಶಾಂತಿ ಕಾಪಾಡಾಬೇಕು ಅಂತ ಹೇಳಿದ್ದಾರೆ. ಉಕ್ರೇನ್ ದೇಶಕ್ಕೆ ಪೋಲ್ಯಾಂಡ್ ನಿಂದ 20 ಗಂಟೆಗಳ ಕಾಲ ರೈಲಿನಲ್ಲಿ ಪ್ರಯಾಣ ಮಾಡಿ. ಆ ದೇಶದಲ್ಲಿ ಆಗಿರುವ ಅನಾಹುತಗಳನ್ನ ಕಣ್ಣಾರೆ ಕಂಡಿದ್ದಾರೆ ಎಂದರು.
ಎರಡು ದೇಶಗಳ ನಡುವೆ ಸಾಮರಸ್ಯ ಬೆಸೆಯುವಂತೆ ಸಂದೇಶ ನೀಡಿದ್ದಾರೆ. ಶಾಂತಿ ನೆಲೆಸಲು ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q