ಖ್ಯಾತ ನಟ ಡಾರ್ಲಿಂಗ್ ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾದಲ್ಲಿ ನಟಿಸಿದ್ದ ಹಿರಿಯ ನಟಿ ಆಶಾ ಶರ್ಮಾ(88) ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.
ಏಕ್ತಾ ಕಪೂರ್ ಅವರ ಖ್ಯಾತ ಕಾರ್ಯಕ್ರಮ ʻಕುಂಕುಮ್ ಭಾಗ್ಯʼ ಮೂಲಕ ಆಶಾ ಶರ್ಮಾ ಜನಪ್ರಿಯರಾಗಿದ್ದರು. ʻಕುಂಕುಮ್ ಭಾಗ್ಯʼ ಡ್ರಾಮಾ ಶೋ ಮೂಲಕ ಜನಪ್ರಿಯವಾಗಿದ್ದ ನಟಿ ಹೆಚ್ಚಾಗಿ ತಾಯಿ ಮತ್ತು ಅಜ್ಜಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಕೊನೆಯದಾಗಿ ಪ್ರಭಾಸ್ ಹಾಗೂ ಕೃತಿ ಸನೋನ್ ನಟನೆಯ ʻಆದಿಪುರುಷ್ʼ ಸಿನಿಮಾದಲ್ಲಿ ʻಶಬರಿʼ ಪಾತ್ರ ನಿರ್ವಹಿಸಿದ್ದರು. ಇವರ ಪಾತ್ರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು.
ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಟಿ ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಆಶಾ ಶರ್ಮಾ ನಿಧನಕ್ಕೆ ಸಿನಿ ಮತ್ತು ಟಿವಿ ಆರ್ಟಿಸ್ಟ್ಸ್ ಅಸೋಸಿಯೇಷನ್ ಎಕ್ಸ್ ಖಾತೆಯಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ಸಂತಾಪ ಸೂಚಿಸಿದೆ. ಜೊತೆಗೆ ಹಿರಿಯ ನಟಿ ಹೇಮಾ ಮಾಲಿನಿ, ಪ್ರೇಮ್ ಚೋಪ್ರಾ, ಅರುಣಾ ಇರಾನಿ ಮತ್ತು ನಿರುಪಾ ರಾಯ್ ಸೇರಿದಂತೆ ಬಾಲಿವುಡ್‌ನ ಹಿರಿಯ ನಟ–ನಟಿಯರು ಕಂಬನಿ ಮಿಡಿದಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q