ಲಖನೌ: ಮುಸ್ಲಿಮರು ಬಿಜೆಪಿಯನ್ನು ನಿರ್ಬಂಧಿಸುವ ಅವರ ಫ್ಯಾಶನ್ ನ್ನು ಬದಲಿಸಬೇಕು ಅಂತ ಬಿಜೆಪಿಯ ಹಿರಿಯ ನಾಯಕ ಮುಖ್ತಾರ್ ಅಬ್ಬಾಸ್ ನಖ್ವಿ ಗುರುವಾರ ಹೇಳಿಕೆ ನೀಡಿದ್ದಾರೆ.
ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಸದಸ್ಯತ್ವ ಅಭಿಯಾನದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಮುಸ್ಲಿಂರಲ್ಲಿ ಅಪನಂಬಿಕೆಯನ್ನು ವಿಶ್ವಾಸವನ್ನಾಗಿ ಪರಿವರ್ತಿಸುವುದು ಇಂದಿನ ಅಗತ್ಯವಾಗಿದೆ. ಬಿಜೆಪಿಯನ್ನು ಸೋಲಿಸುವ ಅಲ್ಪಸಂಖ್ಯಾತರು ಮತ್ತು ಮುಸ್ಲಿಮರ ತಮ್ಮ ದಶಕಗಳ ಪ್ಯಾಷನ್ ಅನ್ನು ಬದಲಿಸಲು ಶ್ರಮಿಸಬೇಕು. ಅವರು ಬಿಜೆಪಿ ಬೆಂಬಲಿಸುವಂತೆ ಮಾಡಬೇಕು. ಅಭಿವೃದ್ಧಿಯ ವಿಷಯದಲ್ಲಿ ಬಿಜೆಪಿ ಯಾವುದೇ ವರ್ಗದ ವಿರುದ್ಧ ತಾರತಮ್ಯ ಮಾಡದಿದ್ದಾಗ ಬಿಜೆಪಿಗೆ ಮತ ಹಾಕಲು ಯಾವುದೇ ಹಿಂಜರಿಕೆ ಬೇಡ ಎಂದರು.
ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸೆಕ್ಯುಲರ್ ಸಿಂಡಿಕೇಟ್ ಎಂದು ಕರೆಯಲ್ಪಡುವ ಪ್ಯೂಡಲ್ ಸುಲ್ತಾನರು ದೀರ್ಘಕಾಲದವರೆಗೆ ಮುಸ್ಲಿಮರಲ್ಲಿ ಬಿಜೆಪಿ ಬಗ್ಗೆ ಭಯದ ವಾತಾವರಣವನ್ನ ಹೆಚ್ಚಿಸಿದ್ದಾರೆ ಅಂತ ಹೇಳಿದರು.
ಬಿಜೆಪಿ ಮತ್ತು ಪ್ರಧಾನಿ ಮೋದಿಯವರ ವಿರುದ್ಧ ‘ಸಂವಿಧಾನ ವಿರೋಧಿ’ ಎಂಬ ಆರೋಪ ಹೊರಿಸಲಾಗಿದೆ. ಇದು ‘ಸತ್ಯದ ಪರ್ವತವನ್ನು ಸುಳ್ಳಿನ ಪೊದೆಯಡಿಯಲ್ಲಿ ಮರೆಮಾಚುವ ಪಟ್ಟಭದ್ರರ ಪ್ರಯತ್ನವೇ ಹೊರತು ಬೇರೇನೂ ಅಲ್ಲ. ಮೋದಿಯವರು ಸಂವಿಧಾನವನ್ನು ಹೃದಯಕ್ಕೆ ಹತ್ತಿರವಾಗಿಟ್ಟುಕೊಂಡು ಉತ್ತಮ ಆಡಳಿತ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q