ನವದೆಹಲಿ: ದೊಡ್ಡ ದೊಡ್ಡ ಟೀ ಬ್ರ್ಯಾಂಡ್ ಗಳು ಚಹಾ ಬೆಲೆಯನ್ನು ಹೆಚ್ಚಳ ಮಾಡಿದ್ದು, ಚಹಾ ಪ್ರಿಯರಿಗೆ ಬೆಲೆ ಏರಿಕೆ ಕೈಸುಡಲಿದೆ.
ದೇಶದ ಎರಡು ಪ್ರಮುಖ ಪ್ಯಾಕೇಜ್ಡ್ ಟೀ ಮಾರಾಟ ಕಂಪನಿಗಳಾದ ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ (HUL) ಮತ್ತು ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ (TCPL) ಶೀಘ್ರದಲ್ಲೇ ಚಹಾದ ಬೆಲೆಗಳನ್ನು ಹೆಚ್ಚಿಸಲಿವೆ.
ಚಹಾದ ಸ್ಟಾಕ್ ಕಡಿಮೆಯಾಗುವುದು ಮತ್ತು ಹೆಚ್ಚುತ್ತಿರುವ ಉತ್ಪಾದನಾ ವೆಚ್ಚಗಳು ಬೆಲೆ ಏರಿಕೆಗೆ ಕಾರಣವಂತೆ. ಹೀಗಾಗಿ ಗ್ರಾಹಕರಿಗೆ ಚಹಾವು ದುಬಾರಿಯಾಗಿರುತ್ತದೆ.
ದೇಶದ ಅತಿ ದೊಡ್ಡ ಚಹಾ ಉತ್ಪಾದಿಸುವ ರಾಜ್ಯಗಳಾದ ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಉತ್ಪಾದನೆಯಲ್ಲಿ ಕುಸಿತ ಕಂಡುಬಂದಿದೆ. ಜನವರಿಯಿಂದ ಜುಲೈವರೆಗೆ ಚಹಾ ಉತ್ಪಾದನೆ ಶೇ.13ರಷ್ಟು ಕುಸಿದಿದೆ. ಇದರಿಂದ ಚಹಾ ಬೆಲೆ ಏರಿಕೆಯಾಗುತ್ತಿದೆ ಎಂದು ಹೇಳಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296