ಸರಗೂರು: ತಾಲೂಕಿನ ಬಿ ಮಟಕೆರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭಾಗ್ಯ ಬಿ ಹಾಗೂ ಸಿಬ್ಬಂದಿಗಳು ಪಂಚಾಯಿತಿ ಹಣ ದುರುಪಯೋಗಪಡಿಸಿಕೊಂಡಿದ್ದಾರೆಂದು ಗ್ರಾ.ಪಂ. ಅಧ್ಯಕ್ಷ ಮತ್ತು ಸದಸ್ಯರು ಆರೋಪಿಸಿದರು.
ಗ್ರಾ.ಪಂ. ಅಧ್ಯಕ್ಷ ನಾಗೇಂದ್ರ ಮತ್ತು ಉಪಾಧ್ಯಕ್ಷೆ ಭಾರತಿ ಮತ್ತು ಸದಸ್ಯರ ನೇತೃತ್ವದಲ್ಲಿ ಜಿಲ್ಲಾ ಪಂಚಾಯತ್ ಅಧಿಕಾರಿಗಳಿಗೆ ಅ. 13/08/2024 ರಂದು ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಅದರ ದೂರಿನ ಮೇರೆಗೆ ಬುಧವಾರದಂದು ಪಂಚಾಯಿತಿಯಲ್ಲಿ ಜಿಲ್ಲಾ ಪಂಚಾಯತ್ ತನಿಖಾ ತಂಡ ಪಂಚಾಯಿತಿ ಗೆ ನೀಡಿ ಕಡತಗಳನ್ನು ಪರಿಶೀಲನೆ ನಡೆಸಿದರು.
ನಂತರ ಮಾತನಾಡಿದ ತನಿಖೆ ತಂಡ ಅಧಿಕಾರಿ, ಸರಿಯಾದ ರೀತಿಯಲ್ಲಿ ಕಡತಗಳನ್ನು ಪರಿಶೀಲನೆ ಮಾಡಲು ನೀಡಿಲ್ಲ. ಆದರೆ ಒಂದು ಕಡತ ಕೇಳಿದರೆ, ಇನ್ನೂ ಯಾವ್ಯಾವುದೋ ದಾಖಲು ನೀಡುತ್ತಿದ್ದಾರೆ. ಆದ್ದರಿಂದ ನಮ್ಮ ಮೇಲಿನ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಲಾಗುವುದು ಎಂದರು.
ನಂತರ ಮಾಜಿ ಉಪಾಧ್ಯಕ್ಷ ದೇವದಾಸ್ ಮಾತನಾಡಿ, ಗ್ರಾ.ಪಂ. ಪಿಡಿಒ ಭಾಗ್ಯ ಅವರು ಸಿಬ್ಬಂದಿಗಳ ಹೆಸರಿಗೆ ಹಣವನ್ನು ಜಮಾ ಮಾಡಿಕೊಂಡು ಸರಕಾರದ ಹಣವನ್ನು ದುರುಪಯೋಗಪಡಿಸಿಕೊಳ್ಳುವುದಲ್ಲದೆ, ಸರ್ವಾಧಿಕಾರ ನಡೆಸುತ್ತಿದ್ದಾರೆ. ಹೊಸದಾಗಿ ಚುನಾವಣೆ ಆಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ಆದಾಗಿನಿಂದ ಇಂದಿನವರೆಗೂ ಸಾಮಾನ್ಯ ಸಭೆ ಮತ್ತು ಗ್ರಾಮಸಭೆಗಳನ್ನು ಮಾಡಿದೆ ಉಡಾಫೆ ಮಾಡುತ್ತಿದ್ದಾರೆ. ಹಾಗೂ ಗ್ರಾ.ಪಂ ಹಣ ದುರ್ಬಳಕೆಯಾಗುತ್ತಿದೆ. ಒಂದೊಂದು ಕಡೆ ಒಂದೇ ಮೋಟಾರ್ ಹಾಗೂ ಸ್ಟಾರ್ಟರ್ ಗಳನ್ನು ಎರಡು ತಿಂಗಳೊಳಗೆ ಮೂರು ಬಾರಿ ರಿಪೇರಿ ಮಾಡಿಸಲಾಗಿದೆ ಎಂದು ಲೆಕ್ಕ ತೋರಿಸಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಡಿ ಜನರ ಮೀಸಲಿಡಬೇಕಾದ ಶೇ.25ರಷ್ಟು ಅನುದಾನ ಮತ್ತು ವಿಶೇಷ ಚೇತನರಿಗೆ ಮೀಸಲಿಡಬೇಕಾದ ಶೇ.3 ರಷ್ಟು ಅನುದಾನವನ್ನು ಮೀಸಲಿಡದೆ ತಮಗಿಷ್ಟ ಬಂದ ರೀತಿಯಲ್ಲಿ ಹಣ ಪಾವತಿ ಮಾಡಿಕೊಳ್ಳುತ್ತಿದ್ದಾರೆ. ಪ್ರತಿಯೊಂದು ಕುಟುಂಬದಲ್ಲಿಯೂ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಸರಕಾರ ಆದೇಶ ನೀಡಿದ್ದರೂ, ಶೌಚಾಲಯ ನಿರ್ಮಾಣ ಮಾಡಿದ ಮೇಲೆ ಫಲಾನುಭವಿಗಳನ್ನು ಹಲವು ತಿಂಗಳು ಅಲೆದಾಡಿಸಿ ಅವರಿಗೆ ಬೇಸತ್ತ ಮೇಲೆ ಅಧ್ಯಕ್ಷರು ಸಹಿ ಹಾಕುತ್ತಾರೆ ಎಂದು ದೂರಿದ್ದಾರೆ.
ಗ್ರಾಪಂ ಅಧ್ಯಕ್ಷ ನಾಗೇಂದ್ರ ಮಾತನಾಡಿ 14 ಮತ್ತು 15 ನೇ ಹಣಕಾಸಿನ ಹಣ ದುರ್ಬಳಕೆಯಾಗಿದೆ. ಎಂಜಿಎನ್‌ಆರ್‌ಇಜಿಎ ಯೋಜನೆಯ ಕೆಲವು ಕಾಮಗಾರಿಗಳು ನಡೆದರೂ, ಎಂಜಿನಿಯರ್ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕಾಮಗಾರಿ ಸರಿಯಾಗಿ ನಡೆದಿದೆ ಎಂದು ಹೇಳಿದರೂ ಗ್ರಾಪಂ ಅಭಿವೃದ್ಧಿ ಅಧಿಕಾರಿ ಅವರು ಹೇಳಿದರೆ ಮಾತ್ರ ಸಹಿ ಹಾಕುತ್ತಾರೆ.
ಯಾವುದೇ ಸಾರ್ವಜನಿಕ ಕೆಲಸ ಕಾರ್ಯಗಳು ನಡೆದಿಲ್ಲ. ಪಿಡಿಒ ರವರಿಗೆ ಹಲವು ಬಾರಿ ಉಪಾಧ್ಯಕ್ಷರು ಹಾಗೂ ಸದಸ್ಯರು ಹೇಳಿದರೂ ಲೆಕ್ಕಿಸದೆ ಸರಕಾರದ ಆದೇಶವನ್ನು ಉಲ್ಲಂಘಿಸಿ ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಹಾಡಿಯ ಮನೆಗಳ ಹಣವನ್ನು ಇವರ ಹೆಸರಿಗೆ ಮಾಡಿಕೊಂಡು ಹಾಡಿಯ ಜನರಿಗೆ ಮನೆಯನ್ನು ಕಟ್ಟಿಕೊಡದೆ ಅವರ ಮೇಲೆ ದಬ್ಬಾಳಿಕೆ ನಡಿಸುತ್ತಿದ್ದಾರೆ ಹಾಗೂ ಪಿಡಿಒ ಅಧಿಕಾರವನ್ನು ಚಲಾಯಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಪಂಚಾಯಿತಿ ಸಿಬ್ಬಂದಿ ವೈಕುಂಠಯ್ಯ ಎಂಬವರಿಗೆ ಅವನ ಸಂಬಳ ಬಿಟ್ಟು ಪಂಚಾಯಿತಿ ಹಣವನ್ನು ಅವರ ಖಾತೆಗೆ ಜಮಾ ಮಾಡಿಕೊಂಡು ಪಂಚಾಯಿತಿ ಹಣವನ್ನು ಲೂಟಿ ಮಾಡಿದ್ದಾರೆ.
ಗ್ರಾ.ಪಂ. ಸದಸ್ಯ ಕುರ್ಣೇಗಾಲ ಬೆಟ್ಟಸ್ವಾಮಿ ಮಾತನಾಡಿ, ಕೈಪಂಪ್, ನಲ್ಲಿಗಳು ಕೆಟ್ಟು ವರ್ಷಗಳೇ ಕಳೆದರೂ ದುರಸ್ಥಿಗೊಳಿಸದೇ ಪಿಡಿಒ ನಿರ್ಲಕ್ಷ್ಯ ವಹಿಸಿದ್ದಾರೆ. ಆದರೆ ಅಧಿಕಾರಿಗಳು ಇದಕ್ಕೆಲ್ಲಾ ಕಡಿವಾಣ ಹಾಕಬೇಕು ಇಲ್ಲವಾದರೆ 11 ಮಂದಿ ಗ್ರಾಪಂ ಸದಸ್ಯರೂ ರಾಜೀನಾಮೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
2022 ರಿಂದ 24–25 ಸಾಲಿನ ತನಕ ಯಾವುದೇ ಪಂಚಾಯಿತಿಯಲ್ಲಿ ಸಾಮಾನ್ಯ ಸಭೆಗಳಲ್ಲಿ ಯಾವುದೇ ಹಣಕಾಸಿನ ಲೆಕ್ಕಪತ್ರಗಳನ್ನು ಮಂಡಿಸಿದೆ. ಸಾಮಾನ್ಯ ಸಭೆಗಳಲ್ಲಿ ಕೇಳಿಕೊಂಡು ಯಾವುದೇ ಹಣಕಾಸಿನ ಲೆಕ್ಕಪತ್ರಗಳನ್ನು ಮಂಡಿಸಿದೆ ಅಭಿವೃದ್ಧಿ ಅಧಿಕಾರಿಗಳು ಮುಂದಿನ ಸಭೆಯಲ್ಲಿ ಕೊಡುತ್ತಾನೆ ಎಂದು ಸಬುಬು ಹೇಳಿ ಇದುವರೆಗೂ ಕೊಟ್ಟಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ನಾಗೇಂದ್ರ, ಉಪಾಧ್ಯಕ್ಷ ಭಾರತಿ ,ಮಾಜಿ ಉಪಾಧ್ಯಕ್ಷ ದೇವದಾಸ್, ಸದಸ್ಯರಾದ ಕುರ್ಣೇಗಾಲ ಬೆಟ್ಟಸ್ವಾಮಿ, ಸುಮತಿ, ರತ್ನಮ್ಮ, ಚಿನ್ನಮ್ಮ,ಮೀನಾಕುಮಾರಿ, ನಾಗೇಶ್ ಇತರರು ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q


