ಸಲ್ಮಾನ್ ಖಾನ್ ಬಳಿ ಹಲವು ಐಶಾರಾಮಿ ವಸ್ತುಗಳಿವೆ. ದೊಡ್ಡ ಸಂಖ್ಯೆಯ ದುಬಾರಿ ಕಾರುಗಳಿವೆ. ಆದರೆ ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಧರಿಸಿರುವುದು ವಿಶ್ವದ ಅತ್ಯಂತ ದುಬಾರಿ ವಾಚುಗಳಲ್ಲಿ ಒಂದು.
ಇತ್ತೀಚೆಗೆ ಜಾಕೋಬ್ ಅರಾಬೋ ಕಂಪನಿಯ ವಾಚ್ ಧರಿಸಿದ್ದರು. ವಾಚ್ನ ಧರಿಸಿ ಅವರು ಪೋಸ್ ಕೊಟ್ಟಿದ್ದಾರೆ. ಇದು ಬಿಲಿಯನೇರ್ III ವಾಚ್ ಅನ್ನೋದು ವಿಶೇಷ. ಇದರಲ್ಲಿ ನೂರಾರು ಡೈಮಂಡ್ಸ್ ಇದೆ. ಜಾಕೋಬ್ ಅವರೇ ಈ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿ ಗಮನ ಸೆಳೆದಿದೆ.
ಜಾಕೋಬ್ ಅವರು ಸಲ್ಲುಗೆ ವಾಚ್ ತೊಡಿಸುತ್ತಿರುವ ಫೋಟೋ ವೈರಲ್ ಆಗಿದೆ. ನಂತರ ಸಲ್ಲು ಅವರು ವಾಚ್ನ ಕ್ಯಾಮೆರಾಗೆ ಶೋ ಮಾಡಿದ್ದಾರೆ. ಯಾರಿಗೂ ಈ ವಾಚ್ನ ಧರಿಸೋಕೆ ನಾನು ಅವಕಾಶ ನೀಡುವುದಿಲ್ಲ ಎಂದಿರುವ ಅವರು ಸಲ್ಲು ಮೇಲಿನ ವಿಶೇಷ ಗೌರವದಿಂದಾಗಿ ಅವರು ವಿಶೇಷವಾಗಿ ಈ ಅವಕಾಶ ನೀಡಿದ್ದಾರೆ.
ಈ ವಾಚ್ನಲ್ಲಿ 152 ವೈಟ್ ಡೈಮಂಡ್ಸ್ ಇದೆ. ಪ್ರತಿ ಸೆಗ್ಮೆಂಟ್ನಲ್ಲಿ 76 ಡೈಮಂಡ್ಸ್ ಇದೆ. ಬ್ರೆಸ್ಲೆಟ್ನಲ್ಲಿ 504 ಡೈಮಂಡ್ಗಳು ಇವೆ. ಇದು ಸೇರಿದಂತೆ ವಾಚ್ನಲ್ಲಿ 714 ಡೈಮಂಡ್ಸ್ ಇವೆ. ಈ ವಾಚ್ನ ಬೆಲೆ 41.5 ಕೋಟಿ ರೂಪಾಯಿ ಎನ್ನಲಾಗಿದೆ. ಈ ವಿಡಿಯೋ ನೋಡಿ ಅನೇಕರು ಅಚ್ಚರಿಪಟ್ಟಿದ್ದಾರೆ. ಈ ವಾಚ್ ಮಾರಿದರೆ ಏನಿಲ್ಲವೆಂದರೂ 5 ರೋಲ್ಸ್ ರಾಯ್ಸ್ ಬರುತ್ತದೆ ಎಂದು ಅನೇಕರು ಹೇಳಿದ್ದಾರೆ.
ಸಲ್ಮಾನ್ ಖಾನ್ ಅವರು ಈ ವಾಚ್ನ ಖರೀದಿ ಮಾಡಿಲ್ಲ. ಅದನ್ನು ಧರಿಸಿ ಪೋಸ್ ಕೊಟ್ಟಿದ್ದಾರಷ್ಟೇ. ಹಾಗಂತ ಸಲ್ಲು ಮನಸ್ಸು ಮಾಡಿದರೆ ಇಷ್ಟು ದುಬಾರಿ ವಾಚ್ನ ಖರೀದಿಸೋದು ಅವರಿಗೆ ಎಷ್ಟು ಹೊತ್ತಿನ ಕೆಲಸವೂ ಅಲ್ಲ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q