ಕೊಲ್ಕತ್ತಾ: ಅನುಮಾನಾಸ್ಪದವಾಗಿ ಪತ್ತೆಯಾಗಿದ್ದ ಚೀಲವನ್ನು ಪರಿಶೀಲನೆ ನಡೆಸುತ್ತಿದ್ದ ವೇಳೆ ಏಕಾಏಕಿ ಭಾರೀ ಸ್ಫೋಟಗೊಂಡು ಒಬ್ಬ ಗಾಯಗೊಂಡಿರುವ ಘಟನೆ ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತ್ತಾದಲ್ಲಿ ನಡೆದಿದೆ.
ಗಾಯಾಳು ವ್ಯಕ್ತಿಯನ್ನ ಎನ್ ಆರ್ ಎಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಶನಿವಾರ ಮಧ್ಯಾಹ್ನ 2:45 ರ ಸುಮಾರಿಗೆ ತಲ್ತಾಲಾ ಪೊಲೀಸ್ ಠಾಣೆಗೆ ಅನುಮಾನಾಸ್ಪದವಾಗಿ ಚೀಲ ಪತ್ತೆಯಾಗಿರುವ ಮಾಹಿತಿ ಬಂದಿತ್ತು. ಆದರೆ ಈ ನಡುವೆ ಅನುಮಾನಾಸ್ಪದ ವಸ್ತು ಸ್ಟೋಟಗೊಂಡಿದೆ.
ಚೀಲವನ್ನು ಪರಿಶೀಲಿಸುವಾಗ, ಅದು ಸ್ಫೋಟಗೊಂಡಿತು, ಇದರಲ್ಲಿ ತ್ಯಾಜ್ಯ ಆಯುವ ವ್ಯಕ್ತಿ ಗಾಯಗೊಂಡಿದ್ದಾನೆ. ಬ್ಲೋಚ್ಮನ್ ಸೇಂಟ್ ಮತ್ತು ಎಸ್ ಎನ್ ಬ್ಯಾನರ್ಜಿ ರಸ್ತೆಯಲ್ಲಿ ಈ ಸ್ಫೋಟ ಸಂಭವಿಸಿದೆ. ಆ ಮೂಲಕ ಹಾದುಹೋಗುತ್ತಿದ್ದ ವ್ಯಕ್ತಿಯೊಬ್ಬ ಚೀಲವನ್ನ ಎತ್ತಲು ಪ್ರಯತ್ನಿಸಿದರು, ನಂತರ ಅದು ಸ್ಫೋಟಗೊಂಡಿದೆ ಎಂದು ವರದಿಯಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296