ತಿಪಟೂರು: ತಿಪಟೂರು ನಗರಕ್ಕೆ ಕುಲುಷಿತ ಕುಡಿಯುವ ನೀರು ಸರಬರಾಜಾಗುತ್ತಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಈಚನೂರು ಕೆರೆಗೆ ಶಾಸಕ ಷಡಕ್ಷರಿ, ನಗರಸಭೆ ಅಧ್ಯಕ್ಷೆ ಯಮುನಾ ಧರಣೇಶ್, ನಗರ ಸಭೆ ಆಯುಕ್ತ ವಿಶ್ವೇಶ್ವರಯ್ಯ ಬದರಗಡೆ ಹಾಗೂ ನಗರಸಭೆ ಸದಸ್ಯರುಗಳಾದ ಯೋಗೀಶ್, ಮಹೇಶ್ ಮತ್ತು ಸುಜಿತ್ ಭೂಷಣ್ ಹಾಗೂ ಧರಣೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಶಾಸಕ ಷಡಕ್ಷರಿ, ನಾವು ಸ್ಥಳ ಪರಿಶೀಲನೆ ಮಾಡಿದಾಗ ಇಲ್ಲಿ ಯು ಜಿ ಡಿ ನೀರು ಕೆರೆಗೆ ನೇರವಾಗಿ ಸೇರುತ್ತಿಲ್ಲ. ಅಲ್ಲಿ ಅಡ್ಡ ಬದು ನಿರ್ಮಾಣ ಮಾಡಲಾಗಿದೆ. ಅತಿವೃಷ್ಟಿ ಮತ್ತು ಪ್ರಕೃತಿ ವಿಕೋಪವಾದಾಗ ಇಂತಹ ಸಣ್ಣಪುಟ್ಟ ಸಮಸ್ಯೆಗಳು ಸರ್ವೇಸಾಮಾನ್ಯ ಆದುದರಿಂದ ಮಳೆಗಾಲದಲ್ಲಿ ಇಂತಹ ಸಣ್ಣಪುಟ್ಟ ಘಟನೆಗಳು ನಡೆದಿರಬಹುದು. ನಾವು ಇಂದಿನಿಂದಲೇ ಇದಕ್ಕೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ನಾನು ಈಚನೂರು ಗ್ರಾಮಸ್ಥರನ್ನು ಕೇಳಿದಾಗ ಅವರು ನನಗೆ ಯು ಜಿ ಡಿ ನೀರಿನ ಯಾವುದೇ ಸಮಸ್ಯೆ ಬಗ್ಗೆ ನನ್ನ ಬಳಿ ಅವರು ಹೇಳಲಿಲ್ಲ. ಆದರೆ ನಾನು ಅದರ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ ಎಂದು ಮಾಹಿತಿ ನೀಡಿದರು.
ನಂತರ ನಗರಸಭೆ ಅಧ್ಯಕ್ಷೆ ಯಮುನಾ ಧರಣೇಶ್ ಮಾತನಾಡಿ, ನಾವು ಇಂದು ಶಾಸಕರ ಜೊತೆ ಈಚನೂರು ಕೆರೆಯ ಸ್ಥಳ ಪರಿಶೀಲನೆ ಮಾಡಿದ್ದು ಅಲ್ಲಿ ಕುಡಿಯುವ ನೀರಿಗೆ ಯಾವುದೇ ಚರಂಡಿ ನೀರು ಮಿಶ್ರಣವಾಗುತ್ತಿಲ್ಲ. ತಿಪಟೂರಿನ ಜನತೆಗೆ ನನ್ನ ಮನವಿ ಯಾರು ಆತಂಕಪಡುವ ಅವಶ್ಯಕತೆ ಇಲ್ಲ. ಯಾವುದೇ ಕಾರಣಕ್ಕೂ ಚರಂಡಿ ನೀರು ಕುಡಿಯುವ ನೀರಿಗೆ ಮಿಶ್ರಣವಾಗುತ್ತಿಲ್ಲ ನಾವುಗಳು ಚರಂಡಿ ನೀರನ್ನು ಬೇರೆ ಕಡೆ ಹೋಗಲು ವ್ಯವಸ್ಥೆ ಮಾಡಿದ್ದೇವೆ ದಯವಿಟ್ಟು ಸಹಕರಿಸಿ ಎಂದು ಮಾಧ್ಯಮದವರಿಗೆ ಮಾಹಿತಿ ನೀಡಿದರು
ವರದಿ: ಆನಂದ್, ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296