ತುಮಕೂರು: ಕೇಂದ್ರ ರೈಲ್ವೆ ಹಾಗೂ ಜಲ ಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರು ಗುರುವಾರ ದೆಹಲಿಯಲ್ಲಿ ನಡೆದ ನೇಪಾಳದ ರಾಷ್ಟ್ರೀಯ ದಿನಾಚರಣೆಯ ಸಮಾರಂಭದಲ್ಲಿ ಭಾಗಿಯಾದರು.
ಇದೇ ವೇಳೆ ನೇಪಾಳದ ಜನತೆಗೆ ರಾಷ್ಟ್ರೀಯ ದಿನದ ಶುಭ ಕೋರಿ ಮಾತನಾಡಿ, ಭಾರತ–ನೇಪಾಳದ ನಡುವೆ ಐತಿಹಾಸಿಕ, ಸಾಂಸ್ಕೃತಿಕ, ಆರ್ಥಿಕ ಸಂಬಂಧಗಳಿದ್ದು, ಮುಂದಿನ ದಿನಗಳಲ್ಲಿ ಮೂಲಭೂತ ಸೌಕರ್ಯ, ಡಿಜಿಟಲ್ ಹಾಗೂ ಆರ್ಥಿಕ ಸಂಪರ್ಕ, ಜಲವಿದ್ಯುತ್, ರೈಲ್ವೆ–ರಸ್ತೆ ಸಾರಿಗೆ ಹಾಗೂ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಿ, ಭಾರತವು ನೇಪಾಳದೊಂದಿಗಿನ ಸಂಬಂಧ-ಸಂಪರ್ಕ ಇನ್ನಷ್ಟು ಹತ್ತಿರವಾಗಿಸಲು ಉತ್ಸುಕವಾಗಿದೆ ಎಂದರು.
ನೇಪಾಳದ ರಾಯಭಾರಿ ಡಾ.ಸುರೇಂದ್ರ ಥಾಪಾ ಅವರು ಸೋಮಣ್ಣರವರನ್ನು ಸ್ವಾಗತಿಸಿ ಭಾರತ — ನೇಪಾಳದ ನಿಕಟ ಸಂಬಂಧವನ್ನು ಶ್ಲಾಘಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q