ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಘೋಷಿಸಿದ ಡಿಜಿಟಲ್ ಇಂಡಿಯಾ ಅಭಿಯಾನವು ದೇಶಾದ್ಯಾಂತ ಹೊಸ ನಿರೀಕ್ಷೆಗಳನ್ನು ಮೂಡಿಸಿತ್ತು. ಮೊಬೈಲ್, ಇಂಟರ್ ನೆಟ್, ಡಿಜಿಟಲ್ ಪಾವತಿ ವ್ಯವಸ್ಥೆ ಎಲ್ಲೆಡೆ ಪ್ರವೇಶಿಸಬಹುದು ಎಂಬ ನಿರೀಕ್ಷೆ ಇಡೀ ದೇಶದಲ್ಲಿ ಇದ್ದರೂ, ಕೆಲವರು ಇದರ ಸಾಮರ್ಥ್ಯವನ್ನು ಪ್ರಶ್ನಿಸುತ್ತಿದ್ದರು. “ಬೀದಿ ಬದಿ ವ್ಯಾಪಾರಿಗಳು, ಆಟೋ ಚಾಲಕರು ಎಲ್ಲಿ ಇಂಥ ತಂತ್ರಜ್ಞಾನವನ್ನು ಬಳಸುತ್ತಾರೆ?” ಎಂಬ ಪ್ರಶ್ನೆ ಸಾಮಾನ್ಯವಾಗಿ ಕೇಳಿಬರುತ್ತಿತ್ತು. ಆದರೆ ಇಂದಿನ ಭಾರತದ ದೃಶ್ಯ ಇನ್ನು ಬೇರೆಯಾಗಿದೆ.
ಇತ್ತೀಚಿನ ದಿನಗಳಲ್ಲಿ ಆಟೋ ಚಾಲಕರೊಬ್ಬರು ತಮ್ಮ ಸ್ಮಾರ್ಟ್ ವಾಚ್ ನಲ್ಲಿ ಕ್ಯೂಆರ್ ಕೋಡ್ ತೋರಿಸಿ ಪಾವತಿಯನ್ನು ಸ್ವೀಕರಿಸಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದು ಡಿಜಿಟಲ್ ಕ್ರಾಂತಿಯ ಸತ್ಯಾಸತ್ಯತೆ ಮನದಟ್ಟಾಗುವಂತೆ ಮಾಡಿದೆ. ಇದು ಡಿಜಿಟಲ್ ಇಂಡಿಯಾಯ ಎದ್ದು ಕಾಣುವ ಒಂದು ಜ್ವಲಂತ ಉದಾಹರಣೆಯಾಗಿದೆ.
ಅದೊಂದು ಕಾಲದಲ್ಲಿ, ಅಸಾಧ್ಯವೆನಿಸಬಹುದಾದ ತಂತ್ರಜ್ಞಾನವನ್ನು ದೇಶದ ಎಲ್ಲೆಡೆ ಬಳಸುತ್ತಿರುವುದು ಈಗ ಸಾಮಾನ್ಯವಾಗಿದ್ದು, ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ಇಂಟರ್‌ನೆಟ್ ಹಾಗೂ ಮೊಬೈಲ್ ತಂತ್ರಜ್ಞಾನವನ್ನು ಸ್ವೀಕರಿಸುತ್ತಿದ್ದಾರೆ. ಮೊದಲು ಬೆಲೆಬಾಳುವ, ಕೇವಲ ನಗರಗಳಿಗೆ ಮಾತ್ರ ಸೀಮಿತವೆಂದು ಪರಿಗಣಿಸಿದ್ದ ಡಿಜಿಟಲ್ ವ್ಯವಸ್ಥೆಗಳು, ಇದೀಗ ದೇಶದ ದೂರದ ಹಳ್ಳಿಗಳಲ್ಲಿಯೂ ಬಳಸಲಾಗುತ್ತಿದೆ.
ಅದರಲ್ಲೂ ಆಟೋ ಚಾಲಕರಂತಹ ಲಘು ವ್ಯಾಪಾರಿಗಳು, ಸಣ್ಣಪುಟ್ಟ ಉದ್ಯಮಿಗಳು ತಮ್ಮ ದಿನನಿತ್ಯದ ವ್ಯವಹಾರಗಳಲ್ಲಿ ಈ ತಂತ್ರಜ್ಞಾನವನ್ನು ಬಳಸುತ್ತಿದ್ದು, ಇದು ಇಂದಿನ ಭಾರತವು ತಂತ್ರಜ್ಞಾನದ ಕ್ರಾಂತಿಯಲ್ಲಿ ಮುನ್ನಡೆಯುತ್ತಿರುವುದನ್ನು ತೋರಿಸುತ್ತದೆ. ಬ್ಯಾಂಕಿಂಗ್ ವ್ಯವಸ್ಥೆ, ಇ–ವ್ಯಾಪಾರ, ಸ್ಮಾರ್ಟ್ ಪಾವತಿ ಎಲ್ಲವನ್ನೂ ಸರಳಗೊಳಿಸಿ, ಡಿಜಿಟಲ್ ಇಂಡಿಯಾ ಅಭಿಯಾನವು ಜನಜೀವನವನ್ನು ಸುಧಾರಿಸಿದೆ.
ಇದು ಕೇವಲ ಪಾವತಿ ವಿಧಾನವಲ್ಲ, ದೇಶದ ಆರ್ಥಿಕತೆಯ ಸಬಲೀಕರಣದ ಸಂಕೇತವಾಗಿದೆ. ಡಿಜಿಟಲ್ ಇಂಡಿಯಾಯ ಗುರಿಯನ್ನು ತಲುಪುವುದರಲ್ಲಿ ಇಂತಹ ಸಣ್ಣ ಪ್ರಯತ್ನಗಳು ಒಂದು ದೊಡ್ಡ ಬೆಳವಣಿಗೆಗೆ ಕಾರಣವಾಗುತ್ತವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q