ಹೈದರಾಬಾದ್: ಜೀಸಸ್ ಬಗ್ಗೆ ಮಾತನಾಡಬಹುದು, ಪ್ರವಾದಿ ಬಗ್ಗೆ ಮಾತನಾಡಬಹುದು ಆದರೆ ಸನಾತನ ಧರ್ಮದ ಬಗ್ಗೆ ಮಾತನಾಡಬಾರದೇ ಎಂದು ನಟ ಪ್ರಕಾಶ್ ರಾಜ್ ವಿರುದ್ಧ ಆಂಧ್ರ ಡಿಸಿಎಂ, ನಟ ಪವನ್ ಕಲ್ಯಾಣ್ ವಾಗ್ದಾಳಿ ನಡೆಸಿದ್ದಾರೆ.
ತಿರುಪತಿ ಲಡ್ಡುಗೆ ಜಗನ್ ರೆಡ್ಡಿ ಸಿಎಂ ಆಗಿದ್ದಾಗ ಪ್ರಾಣಿಗಳ ಕೊಬ್ಬು ಬಳಕೆ ಮಾಡಲಾಗುತ್ತಿತ್ತು ಎಂಬ ವಿಚಾರ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಈ ಸಂಬಂಧ ಆಂಧ್ರ ಡಿಸಿಎಂ ಮತ್ತು ನಟ ಪವನ್ ಕಲ್ಯಾಣ್ ದೇಶದಲ್ಲಿ ಸನಾತನ ಧರ್ಮ ಟ್ರಸ್ಟ್ ನಿರ್ಮಾಣ ಮಾಡುವ ಅಗತ್ಯವಿದೆ ಎಂದಿದ್ದರು. ಈ ಹೇಳಿಕೆಯನ್ನು ಪ್ರಕಾಶ್ ರಾಜ್ ಟೀಕಿಸಿದ್ದರು.
ಪವನ್ ನೀವು ನಿಮ್ಮ ರಾಜ್ಯದ ಬಗ್ಗೆ ಮಾತ್ರ ಗಮನ ಹರಿಸಿ. ಬೇಡದ ವಿಚಾರವೆಲ್ಲಾ ಯಾಕೆ ಎಂಬರ್ಥದಲ್ಲಿ ಪ್ರಕಾಶ್ ರಾಜ್ ಪವನ್ ಕಲ್ಯಾಣ್ ವಿರುದ್ಧ ಹರಿಹಾಯ್ದಿದ್ದರು.
ಈ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಪವನ್ ಕಲ್ಯಾಣ್, ಜೀಸಸ್ ಬಗ್ಗೆ ಮಾತನಾಡಬಹುದು, ಪ್ರವಾದಿ ಬಗ್ಗೆ ಮಾತನಾಡಬಹುದು ಆದರೆ ಸನಾತನ ಧರ್ಮದ ಬಗ್ಗೆ ಮಾತನಾಡಬಾರದೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296