ತುಮಕೂರು: ಗುಬ್ಬಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ವತಿಯಿಂದ ಎಲ್ಲಾ ವೃತ್ತಿಯ ಐ.ಟಿ.ಐ. ಉತ್ತೀರ್ಣ ಹೊಂದಿರುವ ಅಭ್ಯರ್ಥಿಗಳಿಗಾಗಿ ಗುಬ್ಬಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸೆಪ್ಟೆಂಬರ್ 27ರಂದು ಬೆಳಿಗ್ಗೆ 10 ಗಂಟೆಗೆ ಅಪ್ರೆಂಟಿಶಿಪ್ ಮೇಳವನ್ನು ಆಯೋಜಿಸಲಾಗಿದೆ.
ಈ ಮೇಳವನ್ನು ಬೆಂಗಳೂರಿನ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಜಂಟಿ ನಿರ್ದೇಶಕ (ತರಬೇತಿ) ವೈಜಗೊಂಡ ಅವರು ಉದ್ಘಾಟಿಸಲಿದ್ದು ಗುಬ್ಬಿ ಸ.ಕೈ.ತ.ಸಂಸ್ಥೆ ಪ್ರಾಚಾರ್ಯರಾದ ಹೇಮಲತಾ ಅಧ್ಯಕ್ಷತೆ ವಹಿಸಲಿದ್ದಾರೆ.
ಡಿ.ಎಸ್.ಡಿ.ಓ. ನೋಡಲ್ ಅಧಿಕಾರಿ ಕೆಂಪಯ್ಯ ಟಿ.ಕೆ., ಉದ್ಯೋಗಾಧಿಕಾರಿ ಕಿಶೋರ್ ಕುಮಾರ್ ಟಿ.ವಿ.ಎಸ್. ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಹೆಚ್.ಆರ್. ಮ್ಯಾನೇಜರ್ ಪಿ. ನವೀನ್ ಕುಮಾರ್, ಡೆನೋ ಕಿರ್ಲೋಸ್ಕರ್ ಇಂಡಸ್ಟ್ರೀಸ್ ಲಿಮಿಟೆಡ್ ಹೆಚ್.ಆರ್. ಮ್ಯಾನೇಜರ್ ಪ್ರದೀಪ್ ರಾಜ್. ಗುಬ್ಬಿ ಸ.ಕೈ.ತ.ಸಂಸ್ಥೆ ತರಬೇತಿ ಅಧಿಕಾರಿ ರುದ್ರಾಚಾರ್ ಬಿ.ಎನ್., ಜಿಲ್ಲೆಯ ವಿವಿಧ ಕೈಗಾರಿಕೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದು, ಪ್ರಸ್ತುತ ಐ.ಟಿ.ಐ. ಪಾಸಾಗಿರುವ ಎಲ್ಲಾ ವೃತ್ತಿಯ ಅಭ್ಯರ್ಥಿಗಳು ಈ ಅಪ್ರೆಂಟಿಶಿಪ್ ಮೇಳದಲ್ಲಿ ಭಾಗವಹಿಸಿ ಸದುಪಯೋಗಪಡಿಸಿಕೊಳ್ಳಬೇಕು. ಹೆಚ್ಚಿನ ವಿವರಗಳಿಗಾಗಿ ಮೊಬೈಲ್ ಸಂಖ್ಯೆ: 9620063375 / 9481693710ಯನ್ನು ಸಂಪರ್ಕಿಸಬಹುದಾಗಿದೆ ಎಂದು ಗುಬ್ಬಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q