ಆಂಧ್ರಪ್ರದೇಶ: ಲಡ್ಡು ಬಗ್ಗೆ ಮಾತನಾಡಿದ್ದಕ್ಕೆ ಖ್ಯಾತ ತಮಿಳು ನಟ ಕಾರ್ತಿ ವಿರುದ್ಧ ಆಂಧ್ರಪ್ರದೇಶದ ಡಿಸಿಎಂ, ನಟ ಪವನ್ ಕಲ್ಯಾಣ್ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದ್ದು, ಈ ಬೆಳವಣಿಯ ನಂತರ ನಟ ಕಾರ್ತಿ ಕ್ಷಮೆಯಾಚಿಸಿ, ತಮ್ಮ ಪ್ರಬುದ್ಧತೆ ತೋರಿದರು.
ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಾರ್ಯಕ್ರಮ ನಿರೂಪಕಿ ನಟ ಕಾರ್ತಿ ಅವರಿಗೆ ಲಡ್ಡು ಬಗ್ಗೆ ಬಲವಂತವಾಗಿ ಪ್ರಶ್ನೆ ಕೇಳಿದ್ದಾರೆ. ಈ ವೇಳೆ ನಾವು ಈ ಲಡ್ಡು ಬಗ್ಗೆ ಮಾತನಾಡಬಾರದು, ಇದು ಸೂಕ್ಷ್ಮ ವಿಷಯ, ನಮಗೆ ಬೇಡ ಎಂದು ಕಾರ್ತಿ ಹೇಳಿದ್ದರು.
ಇದು ವಿವಾದ ಮಾಡುವಂತಹ ವಿಚಾರವಲ್ಲವಾದರೂ, ಕಾರ್ತಿ ವಿರುದ್ಧ ಡಿಸಿಎಂ ಪವನ್ ಕಲ್ಯಾಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿತ್ರರಂಗದ ವ್ಯಕ್ತಿಗಳು ಈ ವಿಷಯವನ್ನು ಚರ್ಚಿಸಲು ಬಯಸಿದರೆ, ಬೆಂಬಲಿಸಬೇಕು, ಇಲ್ಲದಿದ್ದರೆ ಯಾವುದೇ ಪ್ರತಿಕ್ರಿಯೆ ನೀಡಬಾರದು ಎಂದು ಹೇಳಿದರು.
ಪವನ್ ಕಲ್ಯಾಣ್ ಅವರ ಪ್ರತಿಕ್ರಿಯೆ ವೈರಲ್ ಆದ ಕೂಡಲೇ ಕಾರ್ತಿ ಸಾಮಾಜಿಕ ಮಾಧ್ಯಮದಲ್ಲಿ ಕ್ಷಮೆಯಾಚಿಸಿದ್ದಾರೆ.
ಅವರ ಟ್ವೀಟ್ ಹೀಗಿದೆ: ಪವನ್ ಕಲ್ಯಾಣ್ ಸರ್, ನಿಮಗೆ ಆಳವಾದ ಗೌರವಗಳೊಂದಿಗೆ, ಯಾವುದೇ ಉದ್ದೇಶಪೂರ್ವಕವಲ್ಲದ ತಪ್ಪುಗ್ರಹಿಕೆಗೆ ನಾನು ಕ್ಷಮೆಯಾಚಿಸುತ್ತೇನೆ. ಭಗವಾನ್ ವೆಂಕಟೇಶ್ವರನ ವಿನಮ್ರ ಭಕ್ತನಾಗಿ, ನಾನು ಯಾವಾಗಲೂ ನಮ್ಮ ಸಂಪ್ರದಾಯಗಳನ್ನು ಪ್ರೀತಿಸುತ್ತೇನೆ. ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q