ಪಾವಗಡ: ಪುರಸಭೆಯ ಆವರಣದಲ್ಲಿ 34 ಪುರಸಭೆಯ ಅಂಗಡಿಗಳನ್ನು ಹರಾಜು ಪ್ರಕ್ರಿಯೆಯಲ್ಲಿ 12 ವರ್ಷಗಳ ಮಟ್ಟಿಗೆ ಬಾಡಿಗೆ ನೀಡಲಾಗಿದ್ದು, ಗುರುವಾರ ಬೆಳಗ್ಗೆ 11 ಗಂಟೆಯ ಸಮಯದಲ್ಲಿ ಹರಾಜು ಪ್ರಕ್ರಿಯೆಯನ್ನು ನಡೆಸಲಾಗಿದೆ.
ಮೊದಲನೇ ಹಂತದ 34 ಅಂಗಡಿಗಳನ್ನು ಸಂಜೆ 6:00 ವರೆಗೂ ಹರಾಜು ಹಾಕಲಾಗಿದ್ದು ಬರೋಬ್ಬರಿ ನಾಲ್ಕು ಲಕ್ಷಕ್ಕೂ ಅಧಿಕ ಮೊತ್ತಕ್ಕೆ 34 ಪುರಸಭೆಯ ಮಳಿಗೆಗಳು ಹರಾಜ್ ಆಗಿವೆ
ಈ ಸಂದರ್ಭದಲ್ಲಿ ಅಧ್ಯಕ್ಷ ಪಿ ಎಚ್ ರಾಜೇಶ್, ಉಪಾಧ್ಯಕ್ಷೆ ಗೀತಾ ಹನುಮಂತರಾಯಪ್ಪ, ಮುಖ್ಯ ಅಧಿಕಾರಿ ಜಾಫರ್ ಷರೀಫ್, ಸದಸ್ಯರಾದ ಸುರೇಶ್ ಬಾಬು, ಕಲ್ಪವೃಕ್ಷ ರವಿ, ರಾಮಾಂಜಿನಪ್ಪ, ಸಿ ಎನ್ ರವಿಕುಮಾರ್, ವಿಜಯ ಕುಮಾರ್, ಗಂಗಮ್ಮ, ವೇಲರಾಜು, ಆರೋಗ್ಯ ಅಧಿಕಾರಿ ಶಂಸುದ್ದೀನ್, ವ್ಯವಸ್ಥಾಪಕ ಸಂತೋಷ್ ಸಿಬ್ಬಂದಿಗಳಾದ ಶಾಂತಕುಮಾರ್, ಜ್ಞಾನೇಶ್ ಬಾಬು, ನಂದೀಶ್ ಸೇರಿದಂತೆ ಅನೇಕರು ಹಾಜರಿದ್ದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q