ಪ್ರಸ್ತುತ 2024-25 ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಯ ಪ್ರವೇಶಾತಿಯು ದಿನಾಂಕ: 22.07.2024 ರಿಂದ ಪ್ರಾರಂಭವಾಗಿದ್ದು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು 2024-25ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಯಲ್ಲಿ ಯುಜಿಸಿ ಅನುಮೋದಿತ ಸ್ನಾತಕ/ ಸ್ನಾತಕೋತ್ತರ ಕೋರ್ಸ್ಗಳಾದ ಬಿ.ಎ., ಬಿ.ಕಾಂ., ಬಿ.ಬಿ.ಎ., ಬಿ.ಸಿ.ಎ., ಬಿ.ಎಸ್.ಡಬ್ಲ್ಯು. ಬಿ.ಎಲ್.ಐ.ಎಸ್ಸಿ., ಬಿ.ಎಡ್. (ಸಿ.ಇ.ಟಿ. ಮುಖಾಂತರ) ಹಾಗೂ ಬಿ.ಎಸ್ಸಿ, ಎಂ.ಎ, ಎಂ.ಸಿ.ಜೆ, ಎಂ.ಕಾಂ., ಎಂ.ಎಲ್.ಐ.ಎಸ್ಸಿ., ಎಂ.ಸಿ.ಎ., ಎಂ.ಎಸ್.ಡಬ್ಲ್ಯೂ, ಎಂ.ಎಸ್ಸಿ, ಎಂ.ಬಿ.ಎ., ಪಿ.ಜಿ. ಡಿಪ್ಲೋಮಾ ಪ್ರೋಗ್ರಾಮ್ಸ್, ಡಿಪ್ಲೋಮಾ ಪ್ರೋಗ್ರಾಮ್ಸ್, ಸರ್ಟಿಫಿಕೇಟ್ ಪ್ರೋಗ್ರಾಮ್ಸ್ ಗಳಿಗೆ ಪ್ರದೇಶಾತಿ ಪ್ರಕ್ರಿಯೆಗಳು ಪ್ರಾರಂಭಗೊಂಡಿರುತ್ತವೆ.
ಕರಾಮುವಿ ಬೆಂಗಳೂರಿನಲ್ಲಿ 06 ಪ್ರಾದೇಶಿಕ ಕೇಂದ್ರಗಳಲ್ಲಿ ಪ್ರವೇಶಾತಿಯನ್ನು ಮಾಡಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ತಿಳಿಸುವುದೇನೆಂದರೆ ಕರಾಮುವಿಯ ಅಧಿಕೃತ ವೆಬ್ಸೈಟ್ “www.ksoumysuru.ac.in” ನಲ್ಲಿ KSOU Admission Portal ಮೂಲಕ ಅರ್ಜಿ ಭರ್ತಿ ಮಾಡಿ ನಂತರ ಪ್ರಾದೇಶಿಕ ಕೇಂದ್ರಕ್ಕೆ ಖುದ್ದಾಗಿ ಭೇಟಿ ನೀಡಿ ದಾಖಲಾತಿಗಳ ಪರಿಶೀಲನೆ ನಂತರ ಆನ್ಲೈನ್ ಮುಖಾಂತರ ಪ್ರವೇಶಾತಿ ಶುಲ್ಕ ಪಾವತಿಸಿ ಸಿದ್ದಪಾಠಗಳನ್ನು ಪಡೆಯಬಹುದು.
ಎಂ.ಬಿ.ಎ., ಎಂ.ಸಿ.ಎ. & M.Sc. ಡೇಟಾ ಸೈನ್ಸ್ ಕಾರ್ಯಕ್ರಮಗಳು AICTE ಯಿಂದಲೂ ಮಾನ್ಯತೆ ಪಡೆದಿದೆ (F No: South:West/2023-24/1-43337817229, ದಿನಾಂಕ: 10.06.2023).
ಬಿ.ಎಡ್. ಶಿಕ್ಷಣ ಕ್ರಮವು NCTE ಯಿಂದ ಮಾನ್ಯತೆ ಪಡೆದಿದೆ (F.No: SRC/NCTE/A0S00319/B.ED ODL /KA/2023/143893, ದಿನಾಂಕ 12.12.2023)
ಲ್ಯಾಟರಲ್ ಪ್ರದೇಶ ಅಥವಾ ನೇರ ಪ್ರವೇಶ:
ಇತರೆ ಕಾಲೇಜಿನಲ್ಲಿ ಅಥವಾ Regular ಆಗಿ ಓದುತ್ತಿರುವ ವಿದ್ಯಾರ್ಥಿಗಳು ಮೊದಲ ವರ್ಷ ವ್ಯಾಸಾಂಗ ಮಾಡಿ ಕಾರಣಾಂತರಗಳಿಂದ ಓದಲು ಆಗದಿದ್ದರೆ ಅಥವಾ Regular ಆಗಿ ವಿದ್ಯಾಭ್ಯಾಸ ಮುಂದುವರೆಸಲು ಸಾಧ್ಯವಾಗದಿದ್ದರೆ, ಅಂತಹ ವಿದ್ಯಾರ್ಥಿಗಳು ಅರ್ಹತಾ ಮಾನದಂಡಗಳನ್ನು ಪೂರೈಸಿ 2ನೇ ಮತ್ತು 3ನೇ ವರ್ಷಕ್ಕೆ ಮುಕ್ತ ವಿವಿಯಲ್ಲಿ ಲ್ಯಾಟರಲ್ ಪ್ರವೇಶ ಅಥವಾ ನೇರ ಪ್ರವೇಶ ಆಯ್ಕೆ ಮಾಡಿಕೊಂಡು ವಿದ್ಯಾಭ್ಯಾಸ ಮುಂದುವರೆಸಬಹುದು.
10 ಆನ್ಲೈನ್ ಕೋರ್ಸ್ಗಳು: ಬಿ.ಎ- ಸಾಮಾನ್ಯ (ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ), ಬಿ.ಕಾಂ., ಎಂ.ಎ.- ಕನ್ನಡ, ಇಂಗ್ಲಿಷ್, ಹಿಂದಿ, ಸಂಸ್ಕೃತ, ಅರ್ಥಶಾಸ್ತ್ರ, ಎಂ.ಕಾಂ, ಎಂ.ಬಿ.ಎ., ಎಂ.ಎಸ್ಸಿ-ಗಣಿತಶಾಸ್ತ್ರ, ಸಂಪೂರ್ಣ ಆನ್ ಲೈನ್ ಕೋರ್ಸ್ಗಳು ಇರುತ್ತವೆ.
ಕ.ರಾ.ಮು.ವಿ.ಯು ಪ್ರವೇಶಾತಿಯಲ್ಲಿ ಒದಗಿಸಿರುವ ರಿಯಾಯಿತಿಗಳು
ಬೋಧನಾ ಶುಲ್ಕದಲ್ಲಿ ಶೇ10 ರಷ್ಟುರಿಯಾಯಿತಿ:
• ಬಿ.ಪಿ.ಎಲ್ ಕಾರ್ಡ್ ಹೊಂದಿರುವ ಮಹಿಳಾ ವಿದ್ಯಾರ್ಥಿಗಳಿಗೆ.
• ಡಿಫೆನ್ಸ್ ಹಾಗೂ ಮಾಜಿ ಸೈನಿಕ ವಿದ್ಯಾರ್ಥಿಗಳಿಗೆ.
• ಆಟೋ/ಕ್ಯಾಬ್ ಚಾಲಕರು ಮತ್ತು ಅವರ ಪತಿ/ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ.
• KSRTC/BMTC/NWKSRTC/KKRTC ನೌಕರರುಗಳಿಗೆ.
ಪೂರ್ಣ ಶುಲ್ಕ ವಿನಾಯಿತಿ.
• ತೃತೀಯ ಲಿಂಗದ(Transgender) ವಿದ್ಯಾರ್ಥಿಗಳಿಗೆ.
• ದೃಷ್ಟಿಹೀನ ವಿದ್ಯಾರ್ಥಿಗಳಿಗೆ (B.Ed./MB A ಹೊರತುಪಡಿಸಿ).
• ಕೋವಿಡ್-19ರ ಸಾಂಕ್ರಾಮಿಕ ರೋಗದಿಂದ ಮೃತರಾದ ಆ ತಂದೆ/ತಾಯಿಯ ಮಕ್ಕಳಿಗೆ ಅವರು ಆರ್ಹತೆವಿರುವ ಕೋರ್ಸಿಗೆ ಉಚಿತ ಪ್ರವೇಶಾತಿ ನೀಡಲಾಗುವುದು.
ವಿಶೇಷ ಸೂಚನೆ:
ಕರಾಮುವಿಯಲ್ಲಿ ಪ್ರವೇಶಾತಿ ಪಡೆಯುವ SC/ST/OBC ವಿದ್ಯಾರ್ಥಿಗಳಿಗೂ ಅಗತ್ಯ ದಾಖಲೆಗಳನ್ನು ಒದಗಿಸಿದಲ್ಲಿ SSP ಮುಖಾಂತರ ವಿದ್ಯಾರ್ಥಿ ವೇತನವಿರುತ್ತದೆ ಅಥವಾ ಪೂರ್ಣಶುಲ್ಕ ಮರುಭರಿಕೆಯಾಗುತ್ತದೆ.
ಕ.ರಾ.ಮು.ವಿ.ಯ ವೈಶಿಷ್ಟ್ಯತೆಗಳು/ಸೌಲಭ್ಯಗಳು
• ಪ್ರತಿ ಜಿಲ್ಲೆಯಲ್ಲಿ ಪರೀಕ್ಷಾ ಕೇಂದ್ರ, ಪ್ರತಿ ತಾಲೂಕಿನಲ್ಲಿ ಅಧ್ಯಯನ ಕೇಂದ್ರಗಳ ಸ್ಥಾಪನೆ.
• ಎಲ್ಲಾ ಶೈಕ್ಷಣಿಕ ಕ್ರಮಗಳ ಕಲಿಕಾ ಅಧ್ಯಯನ ಸಾಮಗ್ರಿ ಡಿಜಿಟಲೀಕರಣ, ಪ್ರತ್ಯೇಕ “KSOU ACADEMIC PLAT FORM App” ನ ಮುಖಾಂತರ ವಿದ್ಯಾರ್ಥಿಗಳು ತಮ್ಮ ಕೋರ್ಸ್ಗೆ ಸಂಬಂಧ ಪಟ್ಟ LESSON SOFT COPY, ASSIGNMENT UPLOAD, LIVE CLASSES, VERTUAL CLASSES, OLD QUESTION PAPER EXAMINATION FEE, ಹೀಗೆ ಎಲ್ಲಾ ಇನ್ನಿತರ ಮಾಹಿತಿಗಳನ್ನು ಒಂದೇ App ನಲ್ಲಿ ಒದಗಿಸಲಾಗಿದೆ.
• ಆನ್ಲೈನ್ನಲ್ಲಿ ವಿದ್ಯಾರ್ಥಿಗಳು ಬಿಡುವಿನ ಸಮಯದಲ್ಲಿ ಅಭ್ಯಸಿಸಲು ಅನುಕೂಲವಾಗುವಂತೆ ಕರಾಮುವಿ ದೃಶ್ಯವಾಹಿನಿ ಎಂಬ ಹೆಸರಿನ ಯೂಟ್ಯೂಬ್ ಚಾನೆಲ್ ಕಾರ್ಯನಿರ್ವಹಿಸುತ್ತಿದೆ, ಇದರಲ್ಲಿ ಅಧ್ಯಾಪಕರ ಬೋಧನಾ ವಿಡಿಯೋಗಳು ವಿದ್ಯಾರ್ಥಿಗಳಿಗೆ ಲಭ್ಯವಿರುತ್ತವೆ.
• ಕೌಶಲ್ಯಾಭಿವೃದ್ಧಿಗೆ ಪ್ರತ್ಯೇಕ ವಿಭಾಗ ರಚನೆ, ರಾಜ್ಯದ ಎಲ್ಲೆಡೆ ಕೌಶಲ್ಯಾಭಿವೃದ್ಧಿ ತರಬೇತಿ ಶಿಬಿರಗಳ ಆಯೋಜನೆ.
• ಕ.ರಾ.ಮು.ವಿ. ‘ಪ್ರಸಾರಾಂಗ’, ರೇಡಿಯೋ ಸ್ಥಾಪನೆ.
• ಕ.ರಾ.ಮು.ವಿ. ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಮೂಲಕ ಅತ್ಯಂತ ಕನಿಷ್ಠ ಶುಲ್ಕದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 50 ದಿನಗಳು ವಸತಿಯೊಂದಿಗೆ ತರಬೇತಿ ನೀಡಲಾಗುತ್ತಿದೆ.
• ಡಿಜಿಟಲ್ ಮೌಲ್ಯಮಾಪನದ ಮೂಲಕ ಗುಣಮಟ್ಟದ ಮೌಲ್ಯಮಾಪನ, ಶೀಘ್ರ ಫಲಿತಾಂಶ ಪ್ರಕಟಣೆಗೆ ಅನುಕೂಲ ಮಾಡಲಾಗಿದೆ.
• ಕರಾಮುವಿಯ ವಾರ್ಷಿಕ/ಸೆಮಿಸ್ಟರ್ ಪರೀಕ್ಷೆಗಳು ಬೆಂಗಳೂರಿನ ಅಧ್ಯಯನ ಕೇಂದ್ರದಲ್ಲಿಯೇ ನಡೆಯುತ್ತವೆ. ವಾರಾಂತ್ಯ ಸಂಪರ್ಕ ತರಗತಿಗಳನ್ನು ಮತ್ತು ವಿಜ್ಞಾನ ವಿಷಯಗಳಿಗೆ ಪ್ರಯೋಗಿಕ ತರಗತಿಗಳನ್ನು ಕಲಿಕಾರ್ಥಿ ಸಹಾಯ ಕೇಂದ್ರದಲ್ಲಿ ನಡೆಸಲು ಕ್ರಮವಹಿಸಲಾಗುವುದು.
• ವಿದ್ಯಾರ್ಥಿಗಳಿಗೆ ಗ್ರಂಥಾಲಯ ವ್ಯವಸ್ಥೆಇರುತ್ತದೆ.
• ವಿದ್ಯಾರ್ಥಿಗಳ ಗೊಂದಲಗಳನ್ನು ಬಗೆಹರಿಸುವ ಸಲುವಾಗಿ ವಿಭಾಗವಾರು ಸಹಾಯವಾಣಿಗಳನ್ನು ಸ್ಥಾಪಿಸಲಾಗಿದೆ.
• ಅಂಕಪಟ್ಟಿಗಳು ವಿದ್ಯಾರ್ಥಿಗಳ ವಿಳಾಸಕ್ಕೆ ರಿಜಿಸ್ಟರ್ ಅಂಚೆಯ ಮೂಲಕ ಕಳುಹಿಸಲಾಗುವುದು.
• ರಾಜ್ಯಾದ್ಯಾಂತ 50ಕ್ಕೂ ಹೆಚ್ಚು ಪರೀಕ್ಷಾ ಕೇಂದ್ರಗಳಿವೆ.
• ಕರ್ನಾಟಕದಾದ್ಯಂತ ವಿದ್ಯಾರ್ಥಿಗಳು/ಆಸಕ್ತರು ಹತ್ತಿರದ ಜಿಲ್ಲಾ ಪ್ರಾದೇಶಿಕ ಕೇಂದ್ರಗಳಿಗೂ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರೊ. ಶರಣಪ್ಪ, ವಿ ಹಲಸೆ, ರವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರಾಚಿ ಗೌಡ, ಕರಾಮುವಿ ವ್ಯವಸ್ಥಾಪನಾ ಮಂಡಳಿ ಸದಸ್ಯರು ಹಾಗೂ ಡೀನ್ (ಅಧ್ಯಯನ ಕೇಂದ್ರ) ರವರಾದ ಪ್ರೊ.ಎಂ. ರಾಮನಾಥಂ ನಾಯ್ಡು, ದಿಲೀಪ ಡಿ. ಪ್ರಾದೇಶಿಕ ನಿರ್ದೇಶಕರು, ಬಾಪೂಜಿನಗರ, ಬೆಂಗಳೂರು, ರೋಹಿತ್ ಹೆಚ್.ಎಸ್. ಪ್ರಾದೇಶಿಕ ನಿರ್ದೇಶಕರು, ಯಲಹಂಕ, ಬೆಂಗಳೂರು, ಇವರ ಜೊತೆಗೆ ಬೆಂಗಳೂರು ಹಾಗೂ ಬೆಂಗಳೂರು ವಲಯ ರಾಮನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಪ್ರಾದೇಶಿಕ ಕೇಂದ್ರಗಳ ಪ್ರಾದೇಶಿಕ ನಿರ್ದೇಶಕರುಗಳು ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296