ಕೊರಟಗೆರೆ: ಆರ್ಯವೈಶ್ಯ ಮಂಡಳಿಯಿಂದ ವಿಶೇಷ ವೈಭವದ ನವರಾತ್ರಿ ಮಹೋತ್ಸವಕ್ಕೆ ಸಕಲ ಸಿದ್ಧತೆ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡಿನ ಸುಪ್ರಸಿದ್ಧ ಸೇಲಂ ಕಲಾವಿದರ ತಂಡದಿಂದ 9 ದಿನಗಳ ಕಾಲ ಶ್ರೀ ಕನಿಕ ಪರಮೇಶ್ವರಿ ತಾಯಿಗೆ ಒಂದೊಂದು ದಿನವೂ ಒಂದೊಂದು ಪ್ರೀತಿಯ ವಿಶೇಷ ಅಲಂಕಾರ ನಡೆಯಲಿದೆ ಎಂದು ವಾಸವಿ ಮಂಡಳಿಯ ಅಧ್ಯಕ್ಷರಾದ ಎಂ.ಜಿ.ಸುದೀಪ್ ತಿಳಿಸಿದರು.
ಕೊರಟಗೆರೆ ಪಟ್ಟಣದ ಕನಿಕ ಪರಮೇಶ್ವರಿ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಮಾಹಿತಿ ನೀಡಿದರು.
ಕಾರ್ಯದರ್ಶಿ ರಘು ಮಾತನಾಡಿ, ಈ ಎಲ್ಲಾ ಕಾರ್ಯಕ್ರಮಗಳಿಗೂ ದೇವಿಯ ಸದ್ಭಕ್ತರು ಅತಿ ಹೆಚ್ಚಿನ ಜನಸಂಖ್ಯೆಯಲ್ಲಿ ಬಂದು ತಾಯಿಯ ಕೃಪೆಗೆ ಪಾತ್ರರಾಗುವಂತೆ ಕೊರಟಗೆರೆ ಪಟ್ಟಣದ ಆರ್ಯವೈಶ್ಯ ಮಂಡಳಿ, ವಾಸವಿ ಯುವಜನ ಸಂಘ, ಕನ್ನಿಕಾ ಔದಾರ್ಯ ಸಂಸ್ಥೆ, ವಾಸವಿ ಮಹಿಳಾ ಮಂಡಳಿ ವಾಸವಿ ಮಾತೃ ಮಂಡಳಿ ವತಿಯಿಂದ ಪಟ್ಟಣದ ಎಲ್ಲ ಸಾರ್ವಜನಿಕರಿಗೆ ಈ ಮೂಲಕ ನವರಾತ್ರಿ ಹಬ್ಬಕ್ಕೆ ಆಹ್ವಾನಿಸುತ್ತಿದ್ದೇವೆ ಎಂದು ತಿಳಿಸಿದರು.
ಚಿನ್ನಿ ವೆಂಕಟ ಅವರು ಮಾತನಾಡಿ, ನವರಾತ್ರಿಯ ವಿಶೇಷವಾಗಿ ನೇತ್ರದಾನ ಮಹಾದಾನ ಎನ್ನುವ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು. ಆಸಕ್ತಿ ಉಳ್ಳವರು ತಮ್ಮ ನಿಧನದ ನಂತರ ತಮ್ಮ ಕಣ್ಣುಗಳನ್ನು ದಾನ ಮಾಡುವ ಮುಖೇನ ಅಂದ ಮಕ್ಕಳಿಗೆ ಬೆಳಕಾಗಬೇಕು ಎಂದು ತಿಳಿಸಿದರು.
ನವ ದುರ್ಗೆರ ವಿಶೇಷ ಅಲಂಕಾರ:
ಮೊದಲನೇ ದಿನ:- ಶೈಲಪುತ್ರಿ ಅಲಂಕಾರ
ಎರಡನೇ ದಿನ :-ಬ್ರಹ್ಮಚಾರಿಣಿ ಅಲಂಕಾರ
ಮೂರನೇ ದಿನ:- ಚಂದ್ರಘಂಟ ಅಲಂಕಾರ
ನಾಲ್ಕನೇ ದಿನ :-ಕುಶ್ಮಾಂಡ ಅಲಂಕಾರ
ಐದನೇ ದಿನ :-ಸ್ಕಂದ ಮಾತೆ ಅಲಂಕಾರ
ಆರನೇ ದಿನ :-ಕಾತ್ಯಾಯಿನಿ ಅಲಂಕಾರ
ಏಳನೇ ದಿನ:- ಕಾಳರಾತ್ರಿ ಅಲಂಕಾರ
ಎಂಟನೇ ದಿನ :-ಮಹಾಗೌರಿ ಅಲಂಕಾರ
9ನೇ ದಿನ :-ಸಿದ್ದಿದಾತ್ರಿ ಅಲಂಕಾರ
ಹತ್ತನೇ ದಿನ ಶ್ರೀ ಚಾಮುಂಡೇಶ್ವರಿಯ ಅಲಂಕಾರದೊಂದಿಗೆ ವಿಶೇಷ ಕಾರ್ಯಕ್ರಮಗಳು ಮುಕ್ತಾಯವಾಗುತ್ತದೆ ಎಂದು ವಾಸವಿ ಮಂಡಳಿಯ ಅಧ್ಯಕ್ಷರಾದ ಎಂ.ಜಿ.ಸುದೀಪ್ ತಿಳಿಸಿದರು.
ವರದಿ: ಮಂಜುಸ್ವಾಮಿ ಎಂ.ಎನ್.ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296