ಬೆಂಗಳೂರು: ಯುವಕನೊಬ್ಬ ತನ್ನ ಸ್ನೇಹಿತೆಯ ಮನೆಯಲ್ಲೇ ಸಾವಿಗೆ ಶರಣಾಗಿರುವ ಘಟನೆ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೋಣನಕುಂಟೆಯ ಪಿಳ್ಳಗಾನಹಳ್ಳಿಯ ನಿವಾಸಿ ಮದನ್ (24) ಸಾವಿಗೆ ಶರಣಾದ ಯುವಕನಾಗಿದ್ದಾನೆ.
ಬನ್ನೇರುಘಟ್ಟ ರಸ್ತೆಯ ಸಿ.ಕೆ.ಪಾಳ್ಯದ ಮಂಡಿ ಲೇ ಔಟ್‌ನಲ್ಲಿ ಸಾಗರ ಮೂಲದ ಕಿರುತೆರೆ ಸಹನಟಿ ವೀಣಾ ಎಂಬುವರು ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದಾರೆ. ವೀಣಾಗೆ ಪುನೀತ್ ಹಾಗೂ ಮಾಧವ್ ಸ್ನೇಹಿತರು. ಮೊದಲು ಪುನೀತ್ ಜೊತೆ ವೀಣಾ ಆತೀಯರಾಗಿದ್ದರು. ನಂತರದ ದಿನಗಳಲ್ಲಿ ಪುನೀತ್ ಆಕೆಯಿಂದ ಅಂತರ ಕಾಯ್ದುಕೊಂಡು ದೂರವಾಗಿದ್ದಾನೆ. ವೀಣಾ ಮನೆಗೆ ಮದನ್ ಆಗಾಗ್ಗೆ ಬಂದು ಹೋಗುತ್ತಿದ್ದ.
ತದನಂತರದಲ್ಲಿ ಇವರಿಬ್ಬರ ಮಧ್ಯೆ ಸಲುಗೆ ಬೆಳೆದು ಲಿವಿಂಗ್ ಟುಗೆದರ್ ನಲ್ಲಿದ್ದರು. ಈ ನಡುವೆ ಆಕೆ ಮದುವೆಯಾಗುವಂತೆ ಮದನ್ ನನ್ನು ಒತ್ತಾಯಿಸುತ್ತಿದ್ದರಿಂದ ಇವರಿಬ್ಬರ ಮಧ್ಯೆ ಸಣ್ಣಪುಟ್ಟ ಗಲಾಟೆ ನಡೆಯುತ್ತಿತ್ತು.
ಘಟನೆ ನಡೆದ ದಿನ ವೀಣಾ ಮನೆಗೆ ಮದನ್ ಬಂದಿದ್ದಾನೆ. ಆ ವೇಳೆ ಇವರಿಬ್ಬರ ಮಧ್ಯೆ ಯಾವುದೋ ವಿಚಾರಕ್ಕೆ ಮಾತಿನ ವಾಗ್ವಾದವಾಗಿದೆ. ನಂತರ ಇವರಿಬ್ಬರೂ ಸೇರಿ ರಾತ್ರಿ 7 ಬಾಟಲಿ ಬ್ರೀಜರ್ ಸೇವಿಸಿದ್ದಾರೆ. ವೀಣಾ ರೂಮಿಗೆ ಹೋದಾಗ ಮದನ್ ಬೇರೆ ರೂಮಿಗೆ ಹೋಗಿ ರಾತ್ರಿ 8:30ರ ಸುಮಾರಿನಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ. ಕೆಲ ಸಮಯದ ಬಳಿಕ ವೀಣಾ ಆ ರೂಮಿಗೆ ಹೋಗಿ ನೋಡಿದಾಗ ಮದನ್ ಕೊಠಡಿಯಲ್ಲಿ ಸಾವಿಗೆ ಶರಣಾಗಿರುವುದು ಕಂಡುಬಂದಿದೆ.
ತಕ್ಷಣ ವೀಣಾ ಮದನ್ ತಾಯಿಗೆ ವಿಷಯ ತಿಳಿಸಿದ್ದಾರೆ. ಮದನ್ ಕುಟುಂಬಸ್ಥರು ಈಕೆ ಮನೆ ಬಳಿ ಬಂದು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.ಘಟನೆ ಸಂಬಂಧ ಮದನ್ ತಾಯಿ ಹುಳಿಮಾವು ಠಾಣೆ ಪೊಲೀಸರಿಗೆ ದೂರು ನೀಡಿದ್ದು, ನನ್ನ ಮಗನ ಸಾವಿಗೆ ವೀಣಾ ಕಾರಣ ಎಂದು ಆರೋಪಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


